ಬಿಜೆಪಿ ಕಾರ್ಯಾಲಯದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

ಸಂಜೆವಾಣೆ ವಾರ್ತೆ,
ವಿಜಯಪುರ,ಏ.22:ಬಿಜೆಪಿಗೂ ಜೈನ ಸಮುದಾಯಕ್ಕೂ ಜನಸಂಘ ಕಾಲದಿಂದ ಅವಿನಾಭಾವ ಸಂಬಂಧವಿದ್ದು, ಇಂದಿಗೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ನಮಗೆ ಬೆನ್ನೆಲುಬಾಗಿ ನಿಂತಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲೇ ಅತಿ ಹೆಚ್ಚು ಶ್ರೀಮಂತಿಕೆ ಸಮಾಜವಾಗಿದ್ದರೂ ಜೈನರು ತಮ್ಮ ಶೇ. 70 ರಷ್ಟು ಆದಾಯವನ್ನು ಸಮಾಜಕ್ಕೆ ಅರ್ಪಿಸುವ ಹೃದಯ ಶ್ರೀಮಂತಿಕೆ ಹೊಂದಿದವರು. ದೇಶದಲ್ಲೇ ಅತಿ ಹೆಚ್ಚು ಗೋಶಾಲೆ ಹೊಂದಿರುವ ಜೈನ್ ಸಮಾಜದೊಂದಿಗೆ ನಾವೆಲ್ಲಾ ಸಹೋದರತ್ವದಂತೆ ಬದುಕು ನಡೆಸುತ್ತಾ ಆ ಸಮುದಾಯಕ್ಕೂ ಬಿಜೆಪಿ ರಾಜಕೀಯ ಪ್ರಾತಿನಿಧ್ಯ ನೀಡಲಿದೆ ಎಂದರು.
ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾದ ಜಿಲ್ಲಾಧ್ಯಕ್ಷ ಶೀತಲ್‍ಕುಮಾರ ಓಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನರು ಸಮಾಜದಲ್ಲಿ ಸಮಾನತೆ ಸಾರಲು ಕಲ್ಯಾಣ ಕರ್ನಾಟಕ ನಿರ್ಮಿಸಿದಂತೆ, ಭಗವಾನ್ ಮಹಾವೀರರು ಬಿಹಾರವನ್ನು ಕಲ್ಯಾಣ ಬಿಹಾರ ಮಾಡಿದರು. ಅವರು ರಾಜರ ಮಗನಾದರೂ ಎಲ್ಲವನ್ನು ತ್ಯಜಿಸಿ ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು, ಎಲ್ಲರೂ ಯಾವುದೇ ಬೇಧಭಾವಗಳಿಲ್ಲದೇ ಬದುಕು ಸಾಗಿಸಬೇಕೆಂಬುದು ಮಹಾವೀರರ ಸಂದೇಶ. ದೇಶÀವನ್ನು ಶಾಂತಿಯ ವನವನ್ನಾಗಿ ಮಾಡಿದ ಮಹಾನ್ ಪುರುಷರು. ಬಿಜೆಪಿ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಮಾಡಿರುವುದು ಇಡೀ ಜೈನ್ ಸಮಾಜಕ್ಕೆ ಹರ್ಷವನ್ನುಂಟು ಮಾಡಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ, ಸರ್ವರಿಗೂ ಮಹಾವೀರ ಜಯಂತಿ ಶುಭಾಶಯ ಕೋರಿದರು. ಅಲ್ಪಸಂಖ್ಯಾತರ ಮೋರ್ಚಾದ ನಗರ ಮಂಡಲ ಅಧ್ಯಕ್ಷ ಸಂತೋಷ ಕವಟೆಕರ ಹಿತನುಡಿಗಳಾಡಿದರು.
ಇದೇ ವೇಳೆ ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬೂ ಮಾಶ್ಯಾಳ, ಮಳುಗೌಡ ಪಾಟೀಲ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಬಿಜೆಪಿ ಮುಖಂಡ ಕೃಷ್ಣಾ ಗುನ್ಹಾಳಕರ ಹಾಗೂ ಇತರರಿದ್ದರು.