ಬಿಜೆಪಿ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಣೆ

ಬೀದರ,ಮೇ.11: ಬೀದರಿನ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಲಯದಲ್ಲಿ ವಿಶ್ವಗುರು ಮಹಾಮಾನವತಾವಾದಿ ಜಗಜ್ಯೋತಿ ಶ್ರೀ ಬಸವೇಶ್ವರರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 891 ಜಯಂತಿ ಉತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಕಲಬುರಿಗ ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಈಶ್ವರಸಿಂಗ್ ಠಾಕೂರ ಅವರು ಮಾತನಾಡಿ, ಮಹಾತ್ಮ ಬಸವೇಶ್ವರರವರು 12ನೇ ಶತಮಾನದಲ್ಲಿ ಸಮಾನತೆಗಾಗಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದರು. ಬಿಜೆಪಿಯ ವರಿಷ್ಠ ನಾಗರಿಕರಾದ ಶಿವರಾಜ ಕುದುರೆ ಅವರು ಮಾತನಾಡಿ 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರವರು ಸಮಾಜದಲ್ಲಿ ಉಂಟಾದ ಅಸ್ಪಶ್ಯೃತೆ ನಿವಾರಣೆಗಾಗಿ ಕ್ರಾಂತಿ ಮಾಡಿದರು. ಮಹಾತ್ಮ ಬಸವೇಶ್ವರರವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪ್ರಕೋಷ್ಠಗಳ ಸಂಚಾಲಕರಾದ ರಾಜಶೇಖರ ನಾಗಮೂರ್ತಿ, ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಾರ್ಯಾಲಯ ಕಾರ್ಯದರ್ಶಿ ರಾಜಕುಮಾರ ಪಾಟೀಲ ನೆಮತಾಬಾದ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ ಚೌಧರಿ, ಅಶೋಕ ಪಾಟೀಲ ಅಲಿಯಾಬಾದ, ಡಾ.ಕಪೀಲ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ ಸಂಜುಕುಮಾರ ಪಟ್ನೆ, ಸ್ವಾಮಿದಾಸ, ಬಸವರಾಜ ಸ್ವಾಮಿ, ಗಣೇಶ ಭೋಸ್ಲೆ, ನವೀನ ಚಿಟ್ಟಾ,ರೋಷನ ವರ್ಮಾ, ನರೇಶ ಗೌಳಿ ಹಾಗೂ ತೀರ್ಥರಾಜ ಶಿವರಾಜ ಕುದುರೆ ಉಪಸ್ಥಿತರಿದ್ದರು.