
ಸೇಡಂ,ಎ,05: ತಾಲೂಕಿನ ಚಿಂಚೋಳಿ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಭಾರತದ ಮಾಜಿ ಉಪ ಪ್ರಧಾನ ಮಂತ್ರಿ,ಸ್ವಾತಂತ್ರ ಹೋರಾಟಗಾರ,ರಾಷ್ಟ್ರ ನಾಯಕ,ನಿರಂತರವಾಗಿ ಶೋಷಿತರ ಮತ್ತು ದುರ್ಬಲರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರು, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ರವರ 114ನೇ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ, ಮಾಲಾರ್ಪಣೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಿದರು.
ಈ ವೇಳೆಯಲ್ಲಿ ಬಿಜೆಪಿ ವಿವಿಧ ಮೋರ್ಚಾಗಳ ಪ್ರಮುಖರು ಹಾಗೂ ಕಾರ್ಯಕರ್ತರು ಈ ವೇಳೆಯಲ್ಲಿ ಇದ್ದರು.