ಬಿಜೆಪಿ ಕಾರ್ಯಕಾರಿಣಿಗೆ ಸಕಲ ಸಿದ್ಧತೆ

ಶಿವಮೊಗ್ಗ, ಡಿ. ೨೭: ಜನವರಿ ೨ ಮತ್ತು ೩ ರಂದು ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಶಿಕಾರಿಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಗೆ ಪ್ರವೇಶಿಸುವ ಮಾರ್ಗಗಳನ್ನ ಅಲಂಕರಿಸಲಾಗುತ್ತಿದೆ.
ಹೆಬ್ಬಾಗಿಲು, ತೋರಣಗಳನ್ನು ಕಟ್ಟಲಾಗುತ್ತಿದೆ. ಕಾರ್ಯಕ್ರಮವು ಜನಸಂಘದ ರಾಜ್ಯ ಸಮಾವೇಶವು ೧೯೭೧ ರಲ್ಲಿ ನಡೆದಿತ್ತು. ೧೯೮೬ ರಲ್ಲಿ ಬಿ.ಬಿ.ಶಿವಪ್ಪ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾಗ ಕಾರ್ಯಕಾರಣಿ ಸಭೆ ನಡೆದಿತ್ತು.
೧೯೯೨ ರಲ್ಲಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಣಿ ನಡೆದಿತ್ತು. ೧೯೯೬ ರಲ್ಲಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದಾಗ ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಕಾರ್ಯಕ್ರಮ ನಡೆದಿದೆ. ತದನಂತರ ಶಿವಮೊಗ್ಗದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಉದಾಹರಣೆಗಳಿಲ್ಲ ಎಂದರು.
೨೫ ವರ್ಷಗಳ ನಂತರ ಶಿವಮೊಗ್ಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸರ್ಕಾರದ ನಿರ್ಣಯಗಳಾದ ಆರ್ಟಿಕಲ್ ೩೭೦ ರದ್ಧತಿ, ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ತ್ರಿವಳಿ ತಲಾಖ್ ರದ್ಧತಿ, ಅನ್ನದಾತರು ನೆಮ್ಮದಿಯಿಂದ ಬದುಕುವ ಹಲವಾರು ಯೋಜನೆಗಳು, ಭಯೋತ್ಪಾದನೆ ನಿರ್ಮೂಲನೆ ಶತೃ ರಾಷ್ಟ್ರಗಳಿಗೆ ದಿಟ್ಟ ಉತ್ತರ ನೀಡುವ ಹೋರಾಟ ರಾಜಕೀಯ ಹೋರಾಟವಲ್ಲ ಅದು ಪ್ರಜಾಪ್ರಭುತ್ವ ಹೋರಾಟದ ಕುರಿತು ಚರ್ಚೆ, ಪಕ್ಷದ ಆಂತರಿಕ ಸಮಸ್ಯೆಗಳನ್ನ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
೨೦೦ಕ್ಕೂ ಹೆಚ್ಚು ಸಚಿವರು ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರೂ. ಜ.೩ ರಂದು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಜ.೩ ರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ಸಿಎಂ ರಿಂದ ವೇದ ಘೋಷಣೆಗಳೊಂದಿಗೆ ಧ್ವಜಾರೋಹಣ, ಗೋಪೂಜೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್‌ಕಟೀಲ್ ಉಪಸ್ಥಿತರಿದ್ದಾರೆ. ಎರಡೂ ದಿನದ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್ ವೈ ಉಪಸ್ಥಿತರಿರುತ್ತಾರೆ ಎಂದರು.