ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಕೊರಟಗೆರೆ, ನ. ೧೨- ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಉಪಚುನಾವಣೆಯಲ್ಲಿ ಸಿರಾ ಮತ್ತು ರಾಜರಾಜೇಶ್ವರಿ ನಗರ ಎರಡರಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಗೆಲುವಿನ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪವನ್‌ಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಮೆಚ್ಚಿ ಎರಡೂ ಕ್ಷೇತ್ರದ ಮತದಾರರು ಅವರಿಗೆ ನೀಡಿರುವ ಗೌರವವಾಗಿದ್ದು, ಸಿರಾ ಮತ್ತು ಆರ್.ಆರ್. ನಗರಗಳ ಸರ್ವತೋಮುಖ ಅಭಿವೃದ್ದಿಗೆ ಈ ಗೆಲುವು ಸಾಕ್ಷಿಯಾಗಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ್‌ಕುಮಾರ್, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಗುರುದತ್, ಮುಖಂಡರುಗಳಾದ ನಟರಾಜು, ಪ್ರಕಾಶ್‌ರೆಡ್ಡಿ, ಮುಕ್ಕಣ್ಣಪ್ಪ, ದೊಡ್ಡಣ್ಣ, ಮೂರ್ತಿ, ಮಹೇಶ್, ಆಟೋ ಗೋಪಿ, ದಯಾನಂದ್, ಮಹೇಂದ್ರ, ದಯಾನಂದ್, ಗಿರಿಯಮ್ಮ, ಪಿ.ವಿ.ಆರಾಧ್ಯ, ಮಾರುತಿ, ಗೋವಿಂದರಾಜು, ಚಂದ್ರಣ್ಣ, ಗೋಪಿ, ದಿವ್ಯಾನಂದ, ಶಬ್ಬೀರ್ ಪಾಲ್ಗೊಂಡಿದ್ದರು.