ಬಿಜೆಪಿ ಕಾರ್ಯಕರ್ತರ ಕೃತಜ್ಞತಾ, ಆತ್ಮಾವಲೋಕನ ಸಭೆ, ಜನಾದೇಶಕ್ಕೆ ತೆಲೆ ಬಾಗುವೆ- ಕುಮಠಳ್ಳಿ,

ಅಥಣಿ : ಜನಾದೇಶಕ್ಕೆ ತೆಲೆ ಬಾಗುವೆ, ಅಧಿಕಾರದ ನಶೆ ನನಗಿಲ್ಲ, ನಾನು ಒಬ್ಬ ಶಾಸಕನಾಗಿ ಏನೇಲ್ಲಾ ಕೆಲಸ ಮಾಡಬೇಕು ಎಂಬುದನ್ನು ಮಾಡಿ ತೋರಿಸಿದ ತೃಪ್ತಿ ನನಗಿದೆ, ಸುಮಾರು 2800 ಕೋಟಿ ಅನುದಾನ, ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ತಂದ 54 ಕೋ ರೂ, ಅನುದಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ಷೇತ್ರದ ಜನರಿಗೆ ಮನವರಿಕೆ ಮಾಡಲು ತಪ್ಪಿದ್ದೇವೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಪಟ್ಟಣದ ಶಿವಣಗಿ ಸಾಂಸ್ಕøತಿಕ ಭವನದಲ್ಲಿ ಬಿಜೆಪಿ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಕೃತಜ್ಞತಾ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ ನಾನು ಮೂಲತಃ ಹೋರಾಟದಿಂದ ಬಂದಂತವನು ರಾಜಕೀಯವಾಗಿ ನಾನು ಅಧಿಕಾರವನ್ನು ಎಂದು ಬಯಸಿಲ್ಲ ನಾನು, ಯಾರನ್ನು ದ್ವೇಸಿಸುವುದಿಲ್ಲ ಆದರೆ ಮುಂದಿನ ದಿನಮಾನಗಳಲ್ಲಿ ಅನ್ಯಾಯವನ್ನು ಸಹಿಸಲ್ಲ, 2018 ರಿಂದ 2023 ರವರೆಗೆ ನಾನು ಯಾವುದೇ ಕಛೇರಿಗಳ ಬಗ್ಗೆ ತೆಲೆ ಕೇಡಿಸಿ ಕೊಂಡಿರಲಿಲ್ಲ, ಕಂದಾಯ ಇಲಾಖೆ ಮತ್ತು ಪೆÇಲೀಸ ಸ್ಟೇಷನ್ ಗಳಲ್ಲಿ ರಾಜಕೀಯೆ ಮಾಡಿದರೆ ನಾವು ಸುಮ್ಮನಿರಲಾರೆವು, ಡಾ, ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ನಮ್ಮ ಹಕ್ಕನ್ನು ಪಡೆದುಕೊಳ್ಳೋಣ, ಹಿಂದಿನ ಕಾಲದಲ್ಲಿ ಯಥಾ ರಾಜ ತಥಾ ಪ್ರಜಾ ಅಂತಾ ಇತ್ತು ಆದರೆ ಇವತ್ತು ಯಥಾ ಪ್ರಜಾ ತಥಾ ರಾಜಾ ಎನ್ನುವಂತೆ ಆಗಿದೆ, 2023 ರ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದು ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿ ಮಾಡೋಣ. 260 ಭೂತಗಳಲ್ಲಿ ಕಾರ್ಯಕರ್ತರು ಉತ್ತಮ ಕಾರ್ಯ ನಿಭಾಯಿಸಿದ್ದಾರೆ ಆದರೂ ಬಿಜೆಪಿಗೆ ಸೋಲಾಗಿದೆ ಈ ಸೋಲಿನಿಂದ ಧೃತಿಗೆಡದೆ, ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯವನ್ನು ನಿರ್ವಹಿಸೋಣ ಎಂದರು.
ಈ ವೇಳೆ ಬಿಜೆಪಿ ಮಂಡಳ ಅಧ್ಯಕ್ಷ ರವಿ ಸಂಕ ಮಾತನಾಡಿ, ಚುನಾವಣೆಯಲ್ಲಿ ನಾವೆಲ್ಲರೂ ಸಾಕಷ್ಟು ಪ್ರಯತ್ನ ಮಾಡಿದರು ಚುನಾಚಣೆಯಲ್ಲಿ ನಮ್ಮ ಅಭ್ಯರ್ಥಿ ಸೋಲುವಂತಾಯಿತು ನಮ್ಮ ಕಾರ್ಯಕರ್ತರ ಪರಿಶ್ರಮ ಎಂದಿಗೂ ಹಾಳಾಗುವುದಿಲ್ಲ ಈ ಬಾರಿ ರಾಜ್ಯದಲ್ಲಿ ವಿರೋಧ ಪಕ್ಷಕ್ಕೆ ಅನುಕೂಲವಾಗುವಂತಹ ವಾತಾವರಣ ನಿಮಾರ್ಣವಾಗಿತ್ತು, ಬರುವ ದಿನಮಾನದಲ್ಲಿ ನಾವೆಲ್ಲ ಒಂದಾಗಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಕಾರ್ಯವನ್ನು ಮಾಡೋಣ ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಮತ್ತೆ ನಮ್ಮ ಪಕ್ಷನ್ನ ಬಲ ಪಡಿಸುವಂತಹ ಕಾರ್ಯ ಮಾಡೋಣ ಎಂದರು
ಆನಂತರ ಮಾಜಿ ಜಿ.ಪಂ ಸದಸ್ಯ ಸಿದ್ದಪ್ಪ ಮುದಕ್ಕನ್ನವರ ಮಾತನಾಡಿ, ಬಿಜೆಪಿಯ ಮೂಲ ಕಾರ್ಯಪಡೆ ನಮ್ಮನ್ನು ಬಿಟ್ಟು ವಿರೋಧಿಗಳೊಂದಿಗೆ ಸೇರಿ ನಮಗೆ ಮೋಸ ಮಾಡಿದ್ದರಿಂದ ನಮಗೆ ಸೋಲಾಯಿತು. ಸೋಲೆ ಗೆಲವಿನ ಮಟ್ಟಿಲು, ಎಂಬ ಮಾತಿನಂತೆ ನಮ್ಮ ಸೋಲನ್ನೇ ಗೆಲುವಾಗಿ ಪರಿವರ್ತಿಸೋಣ ಇನ್ನೂ ಮುಂಬರುವ ತಾಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯತ ಹಾಗೂ ಲೋಕಸಭೆ ಚುನಾವಣೆಗಳು ಇದ್ದು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಸುವಂತಾ ಕಾರ್ಯವನ್ನು ಮಾಡೋಣ, ಕಳೆದ 43 ವರ್ಷಗಳಲ್ಲಿ ಬಿಜೆಪಿ ಅನೇಕ ಸೋಲು ಗೆಲವುಗಳನ್ನು ಕಂಡಿದೆ, ಚುನಾವಣೆಯಲ್ಲಿ ಕಾರ್ಯಕರ್ತರ ಬಲ ಎಲ್ಲಿ ಇರುತ್ತೆ ಅಲ್ಲಿ ಗೆಲವು ಇರುತ್ತೆ. ಕಾಂಗ್ರೆಸಿನ ಗ್ಯಾರೆಂಟಿ ಕಾರ್ಡ ಮತ್ತು ಸುಳ್ಳು ಭರವಸೆಗಳು ಯಾವತ್ತು ಸಫಲವಾಗುವುದಿಲ್ಲ, ಎಲ್ಲವೂ ವಿಫಲವಾಗುತ್ತವೆ ಎಂದರು,
ಈ ವೇಳೆ ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಮಾತನಾಡಿ, ಸದ್ಯದಲ್ಲೇ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಗಂಡಾಂತರ ಬರಲಿದೆ, ಇದನ್ನು ನಾಡಿನ ಕೆಲ ಸ್ವಾಮಿಗಳು ಹೇಳಿದಂತೆ ಈಗಾಗಲೇ ಕಾಂಗ್ರೆಸಿನವರು ಬಡೆದಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ಸರ್ಕಾರ ಆಗೋದಿಲ್ಲ, ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳ ಉತ್ತಮ ಸಾದನೆ ಮತ್ತು ಯೋಜನೆಗಳನ್ನ ನೀಡಿದರು ಅಥಣಿಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಅಂತರದಿಂದ ಸೋತಿದ್ದು ಆಶ್ಛರ್ಯ ತಂದಿದೆ, ಇದನ್ನು ಅಳಿಸಲು ಎಲ್ಲರು ಸೇರಿ ದುಡಿಯೋಣ ಎಂದರು.
ಈ ವೇಳೆ ಧರೇಪ್ಪ ಠಕ್ಕಣ್ಣವರ, ಉಮೇಶರಾವ ಬಂಟೋಡ್ಕರ, ಸತ್ಯಾಪ್ಪ ಬಾಗೆನ್ನವರ, ನಿಂಗಪ್ಪ ನಂದೇಶ್ವರ, ನಾನಾಸಾಬ ಅವತಾಡೆ, ಗಿರೀಶ ಬುಟಾಳಿ, ಪ್ರಭಾಕರ ಚವ್ಹಾಣ, ಸುನೀಲ ಸಂಕ, ಶಶಿಕಾಂತ ಸಾಳವೆ, ಉತ್ತಪ್ಪ ಕಾಡದೇವರಮಠ, ರವಿ ಪೂಜಾರಿ, ರಾಜೇಂದ್ರ ಐಹೊಳೆ , ನಿಶಾಂತ ದಳವಾಯಿ, ಸದಾಶಿವ ಕೊಂಪಿ, ಅರ್ಜುನ ಪವಾರ, ಅಣ್ಣಾಸಾಬ ನಾಯಿಕ, ಸಿದ್ದು ಮಾಳಿ, ಅಭಯ ಸಗರಿ ಸೇರಿದಂತೆ ಹಲವರು ಇದ್ದರು.