ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಯತ್ನ; ಹಲವರ ಬಂಧನ, ಬಿಡುಗಡೆ

ಸಂಜೆವಾಣಿ ವಾರ್ತೆ,.
ವಿಜಯಪುರ,ಫೆ.29:ಪಾಕ್ ಪರ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಬೆಂಬಲಿಗರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಕಾಂಗ್ರೆಸ್ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗುತ್ತಾ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಮುಂದಾದರು, ಈ ವೇಳೆ ಪೆÇಲೀಸರು ಕಾರ್ಯಕರ್ತರನ್ನು ತಡೆಯಲು ಮುಂದಾದಾಗ ತಳ್ಳಾಟ ಹಾಗೂ ವಾಗ್ವಾದ ಸಹ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೆÇಲೀಸರು ಕೆಲಕಾಲ ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಪಾಕ್ ಹೆಸರು ಸಹ ಹೇಳಲು ನಮಗೆ ಅಸಹ್ಯವಾಗುತ್ತದೆ, ಅಂತಹ ಸಂದರ್ಭದಲ್ಲಿ ನಮ್ಮ ನಾಡಿನ ಪವಿತ್ರ ಪ್ರಜಾಪ್ರಭುತ್ವ ದೇಗುಲ ವಿಧಾನಸೌಧÀದಲ್ಲಿ ಪಾಕ್ ಜಿಂದಾಬಾದ್ ಎಂದು ಹೇಳಿರುವುದು ಅತ್ಯಂತ ಖಂಡನಾರ್ಹ, ಕಾಂಗ್ರೆಸ್ ಪಕ್ಷ ತೀರಾ ಲಜ್ಜಗೆಟ್ಟಿದೆ, ದೇಶಭಕ್ತಿ ಸಹ ಆ ಪಕ್ಷಕ್ಕೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪಾಕಿಸ್ತಾನಿ ಏಜೆಂಟನಂತೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಹೊರಹಾಕಿದ್ದು, ಅವರ ತಮ್ಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮಂಗಳೂರು ಕುಕ್ಕರ್ ಪ್ರಕರಣದಲ್ಲಿ ಆರೋಪಿಗಳನ್ನೇ ತಮ್ಮ `ಬ್ರದರ್’ ಎಂದು ಹೇಳಿರುವುದು, ಈಗ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ನೋಡಿದರೆ ಒಂದು ರೀತಿ ಅಸಹ್ಯಕರವಾಗಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಭಾರತ ಭೂಮಿ ಪರಮ ಪವಿತ್ರ, ಈ ಭೂಮಿಯಲ್ಲಿದ್ದುಕೊಂಡು ಅನ್ಯ ಅದು ಪಾಕ್ ಜಿಂದಾಬಾದ್ ಎಂದು ಹೇಳಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ ಬುದ್ಧಿಗೇಡಿ, ಲಜ್ಜೆಗೆಟ್ಟ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಪಾಕ್ ಎನ್ನುವ ಹೆಸರು ಅವರ ನಾಲಿಗೆಯಲ್ಲಿ ಅಲ್ಲ ಮನಸ್ಸಿನಲ್ಲಿಯೂ ಬರದಂತೆ ಕಠಿಣ ಶಿಕ್ಷೆ ನೀಡಬೇಕು, ಕಾಂಗ್ರೆಸ್ ನಾಯಕರ ವರ್ತನೆ ಮಿತಿಮೀರಿದೆ, ರಾಷ್ಟ್ರ ಪುರುಷರಾದ ಅಬ್ದುಲ್ ಕಲಾಂ ಅμÁ್ಪಕ್ ಉಲ್ಲಾಖಾನ್ ಇಂಥ ನಾಯಕರನ್ನು ಪ್ರೇರಣೆಯಾಗಿ ಇಟ್ಟುಕೊಳ್ಳದೆ ಮತಾಂದ ರಾಷ್ಟ್ರ ವಿರೋಧಿ ಸಂಘಟನೆಗಳ ಜೊತೆಗೂಡಿ ಇದೇ ರೀತಿ ದೇಶವಿರೋಧಿ ಹೇಳಿಕೆ, ದೇಶ ವಿರೋಧಿ ನಿಲುವು ತಾಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ಹೊರಹಾಕಿದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪಾಕ್ ಘೋಷಣೆ ಮಾಡಿರುವ ವ್ಯಕ್ತಿಯ ಪೂರ್ವಾಪರ ತನಿಖೆಯಾಗಬೇಕು, ಆ ವ್ಯಕ್ತಿ ವಿಧಾನಸೌಧ ಪ್ರವೇಶಿಸಲು ಪಾಸ್ ನೀಡಿದವರು ಯಾರು ಎಂಬಿತ್ಯಾದಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶಂಕರ ಹೂಗಾರ, ಮಂಜುನಾಥ ಮಿಸೆ, ಬಸವರಾಜ ಬಿರಾದಾರ, ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ರಾಜೇಶ ತವಸೆ, ಮಹೇಶ ಒಡೆಯರ, ಚಿದಾನಂದ ಚಲವಾದಿ, ಶ್ರೀಕಾಂತ ಶಿಂಧೆ, ವಿಜಯ ಜೋಶಿ, ಚಂದ್ರು ಚೌಧರಿ, ಪಾಪುಸಿಂಗ್ ರಜಪೂತ, ಸಂತೋಷ ಕುಬದಡ್ಡಿ, ಆನಂದ ಮುಚ್ಚಂಡಿ, ರಾಮಚಂದ್ರ ಚವ್ಹಾಣ, ಪ್ರಶಾಂತ ಅಗಸರ, ಪರಶುರಾಮ, ನಾಗೇಶ, ರವಿ ಚವ್ಹಾಣ, ಪ್ರೇಮ ಬಿರಾದಾರ, ದಶರಥ ಕಾಂಬಳೆ, ವಿಠ್ಠಲ ನಡುವಿನಕೆರೆ, ಜಗದೀಶ ಮುಚ್ಚಂಡಿ ವಿನಾಯಕ ಗೌಳಿ, ಸಚಿನ್ ಕುಮ್ಸಿ, ವಿನೋದ ಮಣೂರ, ವಿನೋದ ತೆಲಸಂಗ, ಸಚಿನ ಬಂಬಳೆ, ಸಂತೋಷ ಕುರದಡ್ಡಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.