ಬಿಜೆಪಿ ಕಾಂಗ್ರೇಸ್ ಸದಸ್ಯತ್ವಕ್ಕೆ ರಾಜೀನಾಮೆ

ಮಾ.೧೮ ರಂದು ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಗೆ ಸಿದ್ದತೆ
ದೇವದುರ್ಗ,ಮಾ.೧೬- ಕಾಂಗ್ರೆಸ್ ಮತ್ತು ಬಿಜೆಪಿಯ ಅರಕೇರಾದ ಕುಟುಂಬ ರಾಜಕಾರಣಕ್ಕೆ ಬೇಸತ್ತು ಜೆಡಿಎಸ್‌ನ ಅಭ್ಯರ್ಥಿಯ ಬೆಂಬಲಿಸಲು ಮಾರ್ಚ ೧೮ ರಂದು ಬೆಂಗಳೂರಿನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಮುಂಡರಗಿಯ ಸಿದ್ದಣ್ಣತಾತರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇವೆ ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಬಿ.ಗಣೇಕಲ್ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ತಾಲೂಕಿಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಖಂಡರುಗಳಾದ ತಾ.ಪಂ. ಸದಸ್ಯರಾದ ಗೋವಿಂದರಾಜ ನಾಯಕ ಜಾಲಹಳ್ಳಿ, ಗೋವಿಂದರಾಜ ನಾಯಕ ಚಿಕ್ಕಗುಡ್ಡ, ಜಿ.ಜಿ.ನಾಯಕ ಮುಂಡರಗಿ, ಕರಿಯಪ್ಪ ಹುಲಿಗುಡ್ಡ, ಎಂ.ಡಿ. ಹಾಜಿಪಾಷ, ಬಾಬಾನಾಯಕ ಗೋವಿಂದಪಲ್ಲಿ, ಇಸ್ಮಾಯಿಲ್ ಸಾಬ್ ಗ್ರಾ.ಪಂ. ಸದಸ್ಯರು ಮಸರಕಲ್, ಆಂಜಿನೆಯ್ಯ ನಾಗಡದಿನ್ನಿ, ನರಸಣ್ಣಗೌಡ ದೇವತಗಲ್, ಮಾನಪ್ಪ ಪರಾಪುರ, ಹಾಜಿಬಾಬು ಕೋತಿಗುಡ್ಡ, ವೆಂಕೋಬ ಗುಜಪು ಮುಂಡರಗಿ, ಶಿವರಾಜ ಮುಂಡರಗಿ, ಮಲ್ಲಯ್ಯ ಬುಳ್ಳ ಮುಂಡರಗಿ, ಶಿವರಾಜ ಬಂಡಿಮನೆ ದೇವತಗಲ್, ಹನುಮಂತ ಬುಳ್ಳ ಮುಂಡರಗಿ, ದೇವಪ್ಪ ದೊಂಡಂಬಳಿ, ದೇವಣ್ಣ ಸಮುದ್ರ, ನರಸಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.