ಬಿಜೆಪಿ-ಕಾಂಗ್ರೆಸ್-ಜೆಡಿಎಸ್ಹುರಿಯಾಳುಗಳಿಂದ ನಾಮಪತ್ರ ಸಲ್ಲಿಕೆ

ಶಿವಮೊಗ್ಗ, ಎ. 20: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ರಾಜಕಾರಣ
ಕಾವೇರಲಾರಂಭಿಸಿದೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ ಪ್ರಮುಖ ರಾಜಕೀಯ
ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಉಮೇದುವಾರಿಕೆ ಅರ್ಜಿ
ಸಲ್ಲಿಸಿದ್ದಾರೆ.ಬಿಜೆಪಿಯಿಂದ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ನಿಂದ ಹೆಚ್.ಸಿ.ಯೋಗೇಶ್ ಹಾಗೂ
ಜೆಡಿಎಸ್ ನಿಂದ ಆಯನೂರು ಮಂಜುನಾಥ್ ಅವರು ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಅರ್ಜಿ
ಸಲ್ಲಿಸಿದ್ದಾರೆ.ಮೆರವಣಿಗೆ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ನಾಮಪತ್ರ
ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದವು.
ಬಿಜೆಪಿ ಪಕ್ಷದ ಮೆರವಣಿಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದರೆ,
ಕಾಂಗ್ರೆಸ್ ಪಕ್ಷದ ಮೆರವಣಿಗೆಯು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಪ್ರಾರಂಭವಾಯಿತು.
ಎರಡೂ ಕಡೆ ಭಾರೀ ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿದ್ದರು.
ಉಳಿದಂತೆ ಜೆಡಿಎಸ್ ಪಕ್ಷವು ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ,
ಅಭ್ಯರ್ಥಿಯು ಪಕ್ಷದ ಮುಖಂಡರೊಂದಿಗೆ ಪಾಲಿಕೆ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಅರ್ಜಿ
ಸಲ್ಲಿಸಿದರು.