ಬಿಜೆಪಿ-ಕಾಂಗ್ರೆಸ್ ಅವಳಿ-ಜವಳಿ ಪಕ್ಷಗಳು : ಪರ್ಯಾಯ ಪಕ್ಷದ ಬೆಂಬಲಿಸಿ

filter: 0; fileterIntensity: 0.0; filterMask: 0; module: h; hw-remosaic: 0; touch: (0.29601136, 0.29601136); modeInfo: ; sceneMode: Night; cct_value: 0; AI_Scene: (-1, -1); aec_lux: 236.12534; hist255: 0.0; hist252~255: 0.0; hist0~15: 0.0;

ಸಂಜೆವಾಣಿ ವಾರ್ತೆ.
ಸಿಂಧನೂರು.ಏ.೧೮- ಈ ದೇಶದಲ್ಲಿ ದುರಾಡಳಿತ ನಡೆಸಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ಜನರನ್ನು ಕಷ್ಟಗಳ ಬೆಂಕಿಯಲ್ಲಿ ದೂಡಿ ತಮ್ಮತನವನ್ನು ಸಾಧಿಸಿಕೊಳ್ಳಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಅವಳಿ – ಜವಳಿ ಪಕ್ಷ ಗಳಾಗಿವೆ ಅದಕ್ಕೆ ಪರ್ಯಾಯ ವಾಗಿ ಸದಾ ಜನರ ಬಗ್ಗೆ ತುಡಿತ ಇರುವ ನಮ್ಮ ಸೋಸಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕೊಪ್ಪಳ ಲೋಕಸಭಾ ಅಭ್ಯರ್ಥಿ ಶರಣಪ್ಪ ಹೇಳಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ನಮ್ಮ ಕಮ್ಯುನಿಸ್ಟ್ ಪಕ್ಷದಿಂದ ದೇಶದಲ್ಲಿ ೧೫೧ ಜನ ಹಾಗೂ ರಾಜ್ಯದಲ್ಲಿ ೧೯ ಜನ ಅಭ್ಯರ್ಥಿ ಗಳು ೧೮ ನೇ ಲೋಕಸಭಾ ಚುನಾವಣೆ ಯಲ್ಲಿ ಕಣಕ್ಕಿಳಿದಿದ್ದಾರೆ.೨೦೧೪ ರಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ದುರಾಡಳಿತಕ್ಕೆ ಹೆಸರು ವಾಸಿಯಾಗಿದೆ.ಮಹಿಳೆಯರಿಗೆ ಭದ್ರತೆ ಇಲ್ಲ , ಕಳೆದ ವರ್ಷದಲ್ಲಿ ೪ ಲಕ್ಷ ಜನ ಸಾಲದ ಬಾದೆಯಿಂದ ಹೊರ ಬರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ೪೪ ಕೊಡ್ ಗಳನ್ನು ತಡೆ ಹಿಡಿದು ಕೇವಲ ನಾಲ್ಕಿ ಕೊಡ್ ಗಳನ್ನು ಜಾರಿಗೆ ತಂದರು.ಅದರ ವಿರುದ್ಧ ದೆಹಲಿ ಯಲ್ಲಿ ಒಂದು ವರ್ಷಗಳ ನಿರಂತರವಾಗಿ ಪ್ರತಿಭಟನೆ ಮಾಡಿದರು ಅದಕ್ಕೆ ಕ್ಯಾರೆ ಎನ್ನದೇ ಬಿಜೆಪಿ ಕೇಂದ್ರ ಸರ್ಕಾರ ೭೮೨ ಜನರ ಸಾವಿಗೆ ಕಾರಣರಾಗಿದ್ದಾರೆ. ಅವರನ್ನು ಸಾಯಿಸಲು ಮುಂದಾದರು.
ಎಲೆಕ್ಟ್ರಾನ್ ಬಾಂಡ್ ಮೂಲಕ ದೊಡ್ಡ ಹಗರಣ ನಡೆಸಿದ್ದಾರೆ.ಆ ಕಾರಣಕ್ಕಾಗಿ ಆಸ್ಪತ್ರೆ, ರಸ್ತೆ, ಕುಡಿಯುವ, ಅಂಗನವಾಡಿ, ಆಶಾ ಕಾರ್ಯಕರ್ತರ ಪರವಾಗಿ ಹಲವಾರು ಹೋರಾಟಗಳನ್ನು ಹಮ್ಮಿಕೊಂಡು ನ್ಯಾಯ ಕೊಡಿಸಲು ಈಗಾಗಲೇ ಮುಂದಾಗಿದ್ದೆವೆ. ಜನ ಪರ,ಅಭಿವೃದ್ಧಿ ಪರ ಆಡಳಿತಕ್ಕೆ ಬೆಂಬಲಿಸಿ ಎಂದು ಪತ್ರಿಕೆ ಮೂಲಕ ವಿನಂತಿಸಿದರು. ಬಿಜೆಪಿ ಕಾಂಗ್ರೆಸ್ ಭಿನ್ನವಾಗಿಲ್ಲ ಎರಡು ಒಂದೆ ಕಾಂಗ್ರೆಸ್ ತಂದ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯನ್ನು ಬಿಜೆಪಿ ಮುಂದುವರೆಸಿದ್ದಾರೆ. ಅಮಿತ್ ಷಾ ಹೇಳ್ತಾರೆ. ಕೊಟ್ಟ ಭರವಸೆ ಗಳನ್ನು ಈಡೇರಿಕೆಗ ಬಗ್ಗೆ ಜುಮ್ಲಾ ಅಂತಾರೆ .೪೦೦ ರೂ ಇದ್ದಂತಹ ಗ್ಯಾಸ್ ೧೧೦೦ ರೂ ಏರಿಕೆ ಮಾಡಿದೆ ಇದು ನಮ್ಮ ದುರಂತ ಎಂದು ಮಾತನಾಡಿದರು. ಬೆಳಗಾವಿ ಯಿಂದ ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕ್ಕೆ ಒಂದು ಕಿ.ಮಿ ೧೮ ಕೋಟಿ ರೂ ಇಡಲಾಗಿದೆ ಅದಕ್ಕೆ ಭೂಮಿ ಒದಗಿಸಿದ ರೈತರ ಖಾತೆಗೆ ಕೇವಲ ೮೦ ಸಾವಿರ ರೂ ನಿಗದಿಗೊಳಿಸಿದ್ದು ಅನ್ಯಾಯ ಶರಣಪ್ಪ ಉದ್ಬಾಳ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಿರುಮಲ್ ರಾವ್, ತಿರುಪತಿ, ಭೀಮರಾಯ ವಕೀಲರು ಉಪಸ್ಥಿತರಿದ್ದರು.