ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ

ಬೀದರ್: ಎ.7:ನಗರದ ನೌಬಾದ್‍ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಬಿಜೆಪಿ 43ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಧ್ವಜಾರೋಹಣ ಮಾಡಿದರು. ಕೇಂದ್ರ ಸಚಿವ ಭಗವಂತ ಖೂಬಾ ಅವರು ಪಕ್ಷದ ಸಂಸ್ಥಾಪಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವಿಸಿದರು.

1980 ರಿಂದ ಯಾವುದೇ ಅಧಿಕಾರದ ಆಸೆ ಇಲ್ಲದೇ ಪಕ್ಷದ ಸಂಘಟನೆಗೆ ದುಡಿದ ಮಹನೀಯರನ್ನು ಖೂಬಾ ಹಾಗೂ ಮಂಠಾಳಕರ್ ಸ್ಮರಿಸಿಕೊಂಡರು.

ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭಾಷಣದ ನೇರ ಪ್ರಸಾರ ವೀಕ್ಷಿಸಲಾಯಿತು.

ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಜಯಕುಮಾರ ಕಾಂಗೆ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶಿವರಾಜ ಗಂದಗೆ, ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಗುರುನಾಥ ಜ್ಯಾಂತಿಕರ್, ಅರಹಂತ ಸಾವಳೆ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ರೇವಣಸಿದ್ದಪ್ಪ ಜಲಾದೆ, ಗುರುನಾಥ ಕೊಳ್ಳೂರ, ರಾಜಕುಮಾರ ಚಿದ್ರಿ, ಮಹೇಶ್ವರ ಸ್ವಾಮಿ, ರಾಜಕುಮಾರ ಪಾಟೀಲ ನ್ಯಾಮತಾಬಾದ್, ಮಹೇಶ ಪಾಲಂ, ಲುಂಬಿನಿ ಗೌತಮ, ಸಂಗೀತಾ ಒಡೆಯರ್, ಶ್ರೀನಿವಾಸ ಚೌಧರಿ, ರಾಜು ಬಿರಾದಾರ, ಸಚ್ಚಿದಾನಂದ ಚಿದ್ರೆ, ಶ್ರೀಕಾಂತ ಮೋದಿ, ರಾಜೇಂದ್ರ ಪೂಜಾರಿ, ಅಶೋಕ ಪಾಟೀಲ, ದೀಪಕ ಗಾದಗೆ, ನಾಗನಾಥ ಮೇತ್ರೆ, ಸಂಜು ಪಾಟೀಲ, ನಿತಿನ್ ಕರ್ಪೂರ, ಸತೀಶ ಸ್ವಾಮಿ, ಸಿದ್ಧರಾಮೇಶ್ವರ ರೆಡ್ಡಿ, ನಿತಿನ್ ನವಲಕಿಲೆ, ಬಸವರಾಜ ಜೋಜನಾ ಮೊದಲಾದವರು ಇದ್ದರು.