ಬಿಜೆಪಿ ಕಚೇರಿಯಲ್ಲಿ ರಾಜ್ಯೋತ್ಸವ

Photo fromSwamy

ಬೆಂಗಳೂರು, ನ. ೧- ಕನ್ನಡರಾಜ್ಯೋತ್ಸವ ದಿನವಾದ ನವೆಂಬರ್ ೧ ರಂದು ಕನ್ನಡತನ ತೋರದೆ ವರ್ಷಪೂರ್ತಿ ಕನ್ನಡತನ ಮೆರೆಯಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ವರ್ಷಪೂರ್ತಿ ಕನ್ನಡತನ ಮೆರೆಯಬೇಕು. ನವೆಂಬರ್ ೧ ರಂದು ಕನ್ನಡತನ ತೋರಿದರೆ ಸಾಲದು ಎಂದರು.
ಬೆಂಗಳೂರಿನಲ್ಲಿ ಇತರ ಭಾಷೆಗಳ ಜತೆ ಮಿಶ್ರಿತ ಕನ್ನಡ ಬಳಕೆಯಾಗುತ್ತಿದೆ. ಸ್ವಚ್ಛ ಕನ್ನಡ ಬಳಸಲು ಎಲ್ಲರೂ ಮುಂದಾಗಬೇಕು ಎಂದರು.
ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸಿ, ಉಳಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ಮತ್ತಿತರರು ಉಪಸ್ಥಿತರಿದ್ದರು.