ಬಿಜೆಪಿ ಕಚೇರಿಯಲ್ಲಿ ಭಗೀರಥ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವಾಗಿ ಪ್ರತಿ ವರ್ಷ ಗಂಗಾಸಪ್ತಮಿ ಎಂದು ಕರೆಯಲಾಗುತ್ತದೆ. ತನ್ನ ಘೋರ ತಪಸ್ಸಿನಿಂದ ದೇವಗಂಗೆಯನ್ನು ಧರೆಗೆ ತಂದ ಮಹರ್ಷಿ ಭಗೀರಥ ಜಯಂತಿಯನ್ನು ಬಿಜೆಪಿಯ ನಗರ ಕಚೇರಿಯಲ್ಲಿ ಇಂದು ಆಚರಿಸಲಾಯ್ತು.
ಇಂದು ಬಳ್ಳಾರಿ ನಗರ ಭಾಜಪ ಕಚೇರಿಯಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾಜಪ ನಗರ ಕ್ಷೇತ್ರದ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ ಅವರು ಭಗೀರಥನ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ನಮನ‌ಸಲ್ಲಿಸಿ, ಭಗೀರಥನ ಪ್ರಯತ್ನದಂತೆ ನಾವೆಲ್ಲ ಕೆಲಸ ಮಾಡಬೇಕು, ಅದಕ್ಕೆ ಅವರ ಸ್ಪೂರ್ತಿ ಹೊಂದಬೇಕು ಎಂದರು.
ಪಕ್ಷದ ಜಿಲ್ಲಾಧ್ಯಕ್ಷರ ಮುರಾರಿಗೌಡ, ಸಿದ್ದೇಶ ಮೊದಲಾದವರು ಇದ್ದರು.