ಬಿಜೆಪಿ ಓಬಿಸಿ ಮೋರ್ಚಾದಿಂದ ಹನುಮಾನ ಚಾಲೀಸಾ ಪಠಣ

ಕಲಬುರಗಿ,ಜ.22:ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಕಲಬುರ್ಗಿಯ ಮಕ್ತಂಪುರದ ಶ್ರೀ ರಾಮ ಮಂದಿರ ( ಬಾಲಾಜಿ ಮಂದಿರ)ದಲ್ಲಿ
ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಹನುಮಾನ ಚಾಲೀಸಾ ಪಠಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲಾಧ್ಯಕ್ಷ ಅರವಿಂದ ಪೆÇೀದ್ದಾರ ಬೆಣ್ಣೆಶಿರೂರ, ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಅಂಬು ಡಿಗ್ಗಿ, ಉಪಾಧ್ಯಕ್ಷರಾದ ನಾಗಪ್ಪ ರೋಣದ, ಪ್ರಧಾನ ಕಾರ್ಯದರ್ಶಿಗಳಾದ ಪ್ರಮೋದ ಧೂಮಾಳೆ, ಜಗದೀಶ ವರ್ಮಾ, ಪಿತಾಂಬರ ಕಲಗುರ್ತಿ, ಸಂಜು ರೇವಣಕರ, ವಿಜಯ ಮಡಿವಾಳ, ಪ್ರಶಾಂತ ನಿಂಭಾಳಕರ, ಸುರೇಶ ತೋಗಟಿ ಕರಿಂನಗರ, ಹಾಗೂ ದೇವಸ್ಥಾನ ಅರ್ಚಕರು ಉಪಸ್ಥಿತರಿದ್ದರು.