ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಅಂಬಾರಾಯ ಅಷ್ಠಗಿ ನೇಮಕ

ಕಲಬುರಗಿ 27: ಕಲ್ಯಾಣ ಕರ್ನಾಟಕ ಭಾಗದ ದಲಿತ ಚಳುವಳಿಯ ಹೋರಾಟಗಾರ, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ, ನವ ಮಂಗಳೂರು ಬಂದರು ಮಂಡಳಿಯ ಮಾಜಿ ಟ್ರಸ್ಟಿ, ಕಲಬುರಗಿ ಜಿಲ್ಲಾ ಬಿಜೆಪಿಯ ಮಾಜಿ ಉಪಾಧ್ಯಕ್ಷರಾಗಿದ್ದ ಅಂಬಾರಾಯ ಅಷ್ಠಗಿಯವರನ್ನು ಬಿಜೆಪಿ ಕರ್ನಾಟಕ ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ದಲಿತ ಮತಗಳನ್ನು ಸೆಳೆಯುವಲ್ಲಿ ಅಷ್ಠಗಿ ಅವರ ಪಾತ್ರ ಮುಖ್ಯವಾಗಿತ್ತು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಅವರ ಗೆಲುವಿಗೆ ಇವರ ಹಗಲಿರುಳು ಕೆಲಸ ಮಾಡಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು
ಇವರ ಸಂಘಟನಾ ಶಕ್ತಿ ಗುರುತಿಸಿ ಪಕ್ಷದ ವರಿಷ್ಠರು ಈ ಜವಾಬ್ದಾರಿಯನ್ನು ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಇವರ ನೇಮಕ ಮಹತ್ವ ಪಡೆದುಕೊಂಡಿದೆ.ಹೀಗಾಗಿ ಅಷ್ಠಗಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ