ಬಿಜೆಪಿ ಎಸ್ಟಿ ಸಮಾವೇಶಕ್ಕೆ ಸಿದ್ದತೆ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.02: ನಗರದ ಟಿ ಬಿ ಸ್ಯಾನಿಟೋರಿಯಂ ಹತ್ತಿರದ ಮೈದಾನದಲ್ಲಿ  ಈ ತಿಂಗಳ 20 ರಂದು ಹಮ್ಮಿಕೊಂಡಿರುವ ರಾಜ್ಯದ ಬಿಜೆಪಿ ಎಸ್ ಟಿ ಮೋರ್ಚಾ ಬೃಹತ್ ಸಮಾವೇಶದ ವೇದಿಕೆ ನಿರಗಮಾಣಕ್ಕೆ ನಿನ್ನೆ ಸಂಜೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾದ್ಯಕ್ಷ ನಂದಿಶ್ ಬಳ್ಳಾರಿ ಪ್ರಭಾರಿ ಸಚ್ಚಿದಾನಂದ ಮೂರ್ತಿ, ಸಿದ್ದೆಶ್ ಯಾದವ್, ಜಿಲ್ಲಾದ್ಯಕ್ಷ ಮುರಹರಗೌಡ, ಸಂಸದ ವೈ ದೇವೆಂದ್ರಪ್ಪ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಗೂತ್ತಿಗನೂರು ವೀರುಪಾಕ್ಷಗೌಡ, ನಗರ  ಶಾಸಕ ಜಿ. ಸೋಮಶೇಖರ ರೆಡ್ಡಿ, ಬುಡ ಅದ್ಯಕ್ಷ ಎಸ್. ಮಾರುತಿ ಪ್ರಸಾದ್, ,ಎಪಿಎಂಸಿ ಅದ್ಯಕ್ಷ  ಬಸಲಿಂಗಪ್ಪ, ಜಿಲ್ಲಾ ಪ್ರಧನ ಕಾರ್ಯದರ್ಶಿ ಕೆ.ಎಸ್. ಅಶೋಕ್ ಕುಮಾರ್, ಜಿಲ್ಲಾ ಎಸ್. ಟಿ. ಮೋರ್ಚಾ ಜಿಲ್ಲಾದ್ಯಕ್ಷ ಹೇಚ್ ಓಬಳೇಶ್, ಮಹಿಳಾ ಮೋರ್ಚಾ ಜಿಲ್ಲಾದ್ಯಕ್ಷೆ ಸುಗುಣ,ಜಿಲ್ಲಾ ಮಾದ್ಯಮ ವಿಭಾಗದ ಸಹ ಸಂಚಾಲಕ ರಾಜಿವ್ ತೋಗರಿ ಇನ್ನೂ ಮುಂತದವರು ಉಪಸ್ಥಿತಿರಿದ್ದರು