ಬಿಜೆಪಿ-ಎಐಎಡಿಎಂಕೆ ಅವಳಿ-ಜವಳಿ ಇದ್ದಂತೆ

ಚೆನ್ನೈ, ಮಾ. ೩೦- ಬಿಜೆಪಿ ಹಾಗೂ ಎಐಎಡಿಎಂಕೆ ತದ್ರೂಪಿ ಅವಳಿಗಳು ತಮಿಳುನಾಡಿನಲ್ಲಿ ಸಾಮಾಜಿಕ ನ್ಯಾಯವನ್ನು ಕಿತ್ತೊಗೆಯಲು ಪ್ರಯತ್ನ ನಡೆಸುತ್ತೀವೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪಿಸಿದರು.
ಎಐಎಡಿಎಂಕೆ ಸರ್ಕಾರದ ಸಾಧನೆ ಹಾಗೂ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವಕಂಡುಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳ ಟೀಕಿಸಿದ ಅವರು ಕಳೆದ ಹಲವು ತಿಂಗಳಿನಿಂದ ಜನಗಳ ನಡುವೆ ನೀವು ಇದ್ದೀರಿ. ಜನತೆಯ ಮನಸ್ಥಿತ ಏನೂ ಎಂಬುದು ನಿಮಗೆ ಅರ್ಥವಾಗಿದೆ ಎಂದು ಹೇಳಿದರು.
ತಮಿಳುನಾಡು ಆಡಳಿತ ಬದಲಾವಣೆ ಜನ ಉತ್ಸಾಹಕಾರಿದ್ದಾರೆ. ನನ್ನ ಸಭೆಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಜನತೆಯಿಂದ ಇದು ನನಗೆ ಅರ್ಥವಾಗುತ್ತಿದೆ. ನಾನು ರಸ್ತೆಗಳಲ್ಲಿ ನಡೆಸುವ ರ್‍ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವ ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸು ಕೊಳ್ಳುವಲ್ಲಿ ಆಸಕ್ತಿ ವಹಿಸಿದ್ದಾರೆ.
ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ ಕಳೆದ ೪ ವರ್ಷಗಳಿಂದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಅವರ ಅಸಡ್ಡೆಯಿಂದ ವರ್ತಿಸಿದ್ದಾರೆ. ತಮಿಳುನಾಡಿನ ಜನ ಎಐಎಡಿಎಂಕೆ ಸರ್ಕಾರವನ್ನು ದ್ವೇಷಿಸುವುದರೊಂದಿಗೆ ಕೋಪಗೊಂಡಿದ್ದಾರೆ. ಇದರಿಂದ ಅವರು ನನ್ನಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಹೇಳಿದರು.
ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ, ಕೈಗಾರಿಕೆ ಅಭಿವೃದ್ಧಿ ಹಿನ್ನಡೆ ತಮಿಳುನಾಡಿನ ಆರ್ಥಿಕತೆ ಕುಸಿತ, ಉಂಟಾಗಿದೆ.ರಾಜ್ಯದ ಜನರಿಗೆ ಉದ್ಯೋಗ ಉಡುಗೊರೆ, ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರವೇ ನಮ್ಮ ಮೂಲ ಉದ್ದೇಶವೆಂದು ಅವರು ಸ್ಟಾಲಿನ್ ಹೇಳಿದರು.