ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಸಿಡಿದೆದ್ದ ಸಿಎಂ

ಸಂಜೆವಾಣಿ ವಾರ್ತೆ
ನಂಜನಗೂಡು: ಏ.13:- ಲೋಕಸಭಾ ಚುನಾವಣೆಯ ಹಿನ್ನೆಲೆ ನಂಜನಗೂಡು ತಾಲೂಕಿನ ಕಳಲೆ ಗೇಟ್ ಸಮೀಪ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರಚಾರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು.
ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಹೆಚ್ ಸಿ ಮಹದೇವಪ್ಪ ಪ್ರಚಾರ ಸಮಾವೇಶದ ನೇತೃತ್ವವನ್ನು ವಹಿಸಿದರು. ದೀಪ ಬೆಳಗುವುದರ ಮೂಲಕ ಬೃಹತ್ ಪ್ರಚಾರ ಸಮಾವೇಶವನ್ನು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರೆ ಅಧಿಕಾರದಲ್ಲಿ ಇದೆ ಅಂತ ಅಲ್ಲ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತಿರಸ್ಕಾರ ಮಾಡಿದರು ಹಾಗಾಗಿ ಇಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಗೆ ಯಾವುದೇ ಸಿದ್ಧಾಂತ ಇಲ್ಲ. ಸಂವಿಧಾನ ಭಾರತ ಮಾತೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ನಾವು ದೇಶಭಕ್ತರು ಅಂತ ಹೇಳಿಕೊಳ್ಳುತ್ತಾರೆ. ನೀವು ದೇಶಭಕ್ತರು ಹಾಗಿದ್ದರೆ ಯಾಕೆ ನೀವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ? ಬಿಜೆಪಿ, ಆರ್ ಎಸ್ ಎಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾರು ಭಾಗಿಯಾಗಿದ್ದಾರೆ ? ಎಂದು ತೋರಿಸಿ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ..! ನಿಜವಾಗಿ ದೇಶಭಕ್ತರಿಂದ ನಾವು ನೀವೆಲ್ಲ ನಮ್ಮನ್ನು ದೇಶ ಭಕ್ತರಲ್ಲ ಎನ್ನುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದರು.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದು ಕಾಂಗ್ರೆಸ್ ಬಿಜೆಪಿಯ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ.? ಅಡ್ವಾಣಿ ಅವರು ಇದ್ರಾ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆರ್ ಎಸ್ ಎಸ್ ನವರು ಒಂದು ದಿನವೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಬಿಜೆಪಿಯವರು ಹೇಗೆ ದೇಶಭಕ್ತರು ಆಗ್ತಾರೆ..! ದೇಶಭಕ್ತರು ಎಂದು ಹೇಳಿಕೊಳ್ಳಲು ಕಾಂಗ್ರೆಸ್ ನವರು ಮಾತ್ರ ಬಿಜೆಪಿಗೆ ಇಲ್ಲ. ಭ್ರಷ್ಟರನ್ನು ಜೈಲಿಗೆ ಕಳುಹಿಸುವುದೇ ನನ್ನ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ಕೊಟ್ಟಿದ್ದಾರೆ.
ಬಾಂಡ್ ಮೂಲಕ ದುಡ್ಡು ಕಲೆಕ್ಷನ್ ಮಾಡಿದ್ರಲ್ಲ 7,600 ಕೋಟಿ ರೂ ತೆರಿಗೆ ಕಟ್ಟಿಲ್ಲ ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ನರೇಂದ್ರ ಮೋದಿಜಿ ಒಂದು ರೂಪಾಯಿಯನ್ನು ಸರ್ಕಾರಕ್ಕೆ ತೆರೆಗೆ ಕಟ್ಟಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳಿಬಿಟ್ರಿ. ಇಂಥವರಿಗೆ ವೋಟು ಕೊಡಬೇಕಾ. ಹತ್ತು ವರ್ಷ ಆಯಿತು ಜನರ ಕಷ್ಟವನ್ನು ಕೇಳಿದ್ದೀರಾ.! ದೇಶದಲ್ಲಿ ನಿರುದ್ಯೋಗ, ಆಹಾರ, ಬೆಲೆ ಏರಿಕೆ ಸಮಸ್ಯೆಯನ್ನು ಬಗೆಹರಿಸಿದ್ದೀರಾ..! ಹತ್ತು ವರ್ಷದಲ್ಲಿ ಒಂದು ದಿನವಾದರೂ ಪತ್ರಕರ್ತರೊಂದಿಗೆ ಪ್ರೆಸ್ ಮೀಟ್ ಮಾಡಿದ್ದೀರಾ..? ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಸರ್ವಾಧಿಕಾರವನ್ನು ಸ್ಥಾಪನೆ ಮಾಡಿ ಹಿಟ್ಲರ್ ಆಡಳಿತವನ್ನು ನಡೆಸುತ್ತಾರೆ ಶ್ರೀಮಂತರ ಪರವಾಗಿ ಮೋದಿಜಿ ಇದ್ದಾರೆ. ದೇಶದಲ್ಲಿ ವಾಸಿಸುವ ಜನರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದ್ರಲ್ಲ ಎಲ್ಲಿ ..? ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರು ಯಾವ ಉದ್ಯೋಗವನ್ನು ಸೃಷ್ಟಿ ಮಾಡಿದ್ದೀರಿ..? ದೇಶದಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ.
ನಾವು ನುಡಿದಂತೆ ನಡೆದಿದ್ದೇವೆ ಅವರು ಸುಳ್ಳು ಹೇಳುತ್ತಾರೆ ನಾವು ಸತ್ಯವನ್ನ ಹೇಳೋಣ 5 ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಬಿಜೆಪಿಯವರಿಗೆ ಜನರು ಬಹುಮತ ನೀಡಿಲ್ಲ ಮುಂಭಾಗದಿಂದ ಅವರು ಯಾವತ್ತೂ ಬಂದಿಲ್ಲ ಹಿಂಭಾಗದಿಂದ ಬಂದಿದ್ದಾರೆ ಆಪರೇಷನ್ ಕಮಲ ಎಂದು ರಾಜ್ಯದಲ್ಲಿ ಯಡಿಯೂರಪ್ಪ ಮಾಡಿದ್ದಾರೆ. ಕುಮಾರಸ್ವಾಮಿಯವರ ಸರ್ಕಾರವನ್ನು ಬೀಳಿಸಿದ್ದು ಭಾರತ ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ಸಿಗೆ ಮತ ನೀಡಿ ಸಂವಿಧಾನ ಇದ್ದರೆ ನಾವು ನೀವು ಇರುತ್ತೇವೆ ಇಲ್ಲದಿದ್ದರೆ ನಾವ್ಯಾರೂ ಇಲ್ಲ.. ಕಾಂಗ್ರೆಸ್ಸಿಗೆ ಮತ ನೀಡಿ ಬಿಜೆಪಿ ಸೋಲಿಸಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಗೆ ಹೆಚ್ಚು ಮತಗಳನ್ನು ಗೆಲ್ಲಿಸಿ ಎಂದು ಬೃಹತ್ ಪ್ರಚಾರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರದಿದ್ದ ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಬೆಂಬಲಿಗರಿಗೆ ಕರೆ ನೀಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನ್ ದ್ರುವ ಧ್ರುವನಾರಾಯಣ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿವಂಗತ ಆರ್ ಧ್ರುವನಾರಾಯಣ್ ಅವರು ರಾಜ್ಯದಲ್ಲಿ ನಂಬರ್ ಒನ್ ಸಂಸದರಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಈ ಭಾಗದಲ್ಲಿ ಕೃಷಿ ಚಟುವಟಿಕೆಗೆ ಮಾಜಿ ಸಚಿವ ದಿವಂಗತ ಮಹದೇವ ಪ್ರಸಾದ್ ಅವರು ಕಾರಣ. ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯದಲ್ಲಿ ಯಶಸ್ವಿಯಾಗಿದೆ. ನುಡಿದಂತೆ ನಡೆದ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಮುಖ್ಯಮಂತ್ರಿಯಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ್ ಅವರು ಅಭಿವೃದ್ಧಿ ಪಡಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನಾಗಿ ನಾವು ಮಾಡಬೇಕು. ಕಾಂಗ್ರೆಸ್ ಭದ್ರಕೋಟೆಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಮಾತನಾಡಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಎರಡು ಕ್ಷೇತ್ರಕ್ಕೆ ಆರ್ಶೀವಾದ ಮಾಡಿದ್ರಿ, ಅಂದು ಆದ ಕೆಲಸ ಕಾರ್ಯಗಳು ಇತಿಹಾಸ ಪುಟ ಸೇರಿವೆ. ಲೋಕಸಭಾ ಚುನಾವಣೆ ನಡೆಯುತ್ತಿರುವುದು ಅಭಿವೃದ್ಧಿ ಒಂದು ಕಡೆ ಕೋಮುವಾದ ಮತ್ತೊಂದು ಕಡೆ ಇದೆ. ಜನರ ಮನಸ್ಸಿನಲ್ಲಿ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡಬೇಕು. ಬಿಜೆಪಿಯವರು ನಂಜನಗೂಡಿಗೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತೋರಿಸಲಿ, ಅಭಿವೃದ್ಧಿ ಮಾಡದೆ. ಸಂವಿಧಾನಕ್ಕೆ ಬಂದಿರುವ ಗಾಂಡಾತರವನ್ನು ತೋಡೆದು ಹಾಕಲು ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನನ್ನ ಪುತ್ರ ಸುನಿಲ್ ಬೋಸ್ ರವರಿಗೆ ಹೆಚ್ಚು ಬಹುಮತವನ್ನು ನೀಡಿ ಬೆಂಬಲಿಸಬೇಕು ಚಾಮರಾಜನಗರ ಲೋಕಸಭಾ ಕ್ಷೇತ್ರದ ಗೆಲುವು ಇಡೀ ರಾಜ್ಯಕ್ಕೆ ಮಾದರಿಯಾಗಿರಬೇಕು ಅಷ್ಟು ಬಹುಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಬೃಹತ್ ಸಮಾವೇಶದಲ್ಲಿ ಸಚಿವ ಎಚ್ ಸಿ ಮಹದೇವಪ್ಪ ಮಾತನಾಡಿದರು. ಬೃಹತ್ ಪ್ರಚಾರ ಸಮಾವೇಶದ ಕೊನೆಯಲ್ಲಿ ಗುಂಡ್ಲುಪೇಟೆ ಶಾಸಕ ದಿವಂಗತ ಮಂತ್ರಿ ಹೆಚ್ ಎಸ್ ಮಹಾದೇವ ಪ್ರಸಾದ್ ರವರ ಪುತ್ರ ಗಣೇಶ್ ಪ್ರಸಾದ್ ಮಾತನಾಡಿ,
ಬೃಹತ್ ಪ್ರಚಾರ ಸಮಾವೇಶದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್, ಸತೀಶ್ ಜಾರಕಿಹೊಳಿ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ತನ್ವೀರ್ ಸೆಠ್ ಕಳಲೆ ಕೇಶವಮೂರ್ತಿ ಕಾಗಲವಾಡಿ ಶಿವಣ್ಣ ಸಿದ್ದರಾಜು ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಶಂಕರ್ ಕೆ.ಮಾರುತಿ ಇಂದನ್ ಬಾಬು ನಾಗೇಶ್ ರಾಜ್ ಲತಾ ಸಿದ್ದಶೆಟ್ಟಿ ನಾಗರಾಜಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.