ಬಿಜೆಪಿ ಆಡಳಿತ ಸಂಪೂರ್ಣ ವಿಫಲ: ಅನೀಲಕುಮಾರ ಜಮಾದಾರ್

ಚಿಂಚೋಳಿ ಮೇ 1: ಕರ್ನಾಟಕ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ಆಡಳಿತ ಸಂಪೂರ್ಣ ವಿಫಲವಾಗಿದೆ ಎನ್ನುವದಕ್ಕೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ.ಎಂದು ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷ ಅನೀಲಕುಮಾರ ಜಮಾದಾರ್ ಅವರು ಹೇಳಿದರು
ಚಿಂಚೋಳಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಷ್ಟ್ರ ಮತ್ತು ರಾಜ್ಯದ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರ ಹಿಡಿದ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮರೆತಿದ್ದು ಜನರ ಇವತ್ತಿನ ಇಂಥಹ ಸಂಕಷ್ಟದ ಸ್ಥಿತಿಯ ಅರಿವು ಮೊದಲೇ ಇದ್ದರೂ ಸಹ ಸರಕಾರ ಬೇಜವಾಬ್ದಾರಿ ತೋರಿದೆ ಯಾವುದೇ ಪೂರ್ವ ತಯ್ಯಾರಿ ಮಾಡಿಕೊಳ್ಳದೆ ದೇಶವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಜನ ಇವತ್ತು ಸಾವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತೆ ಆಗಿದೆ ಜನಸಾಮಾನ್ಯರು ಚಿಂತಾಜನಕ ಪರಿಸ್ಥಿತಿಗೆ ತಲುಪಿದ್ದಾರೆ ಬಿಜೆಪಿ ಪಕ್ಷದ ಆಡಳಿತವು ಇನ್ನೂ ಬುದ್ಧಿ ಬಂದಂತೆ ಇಲ್ಲ ಇನ್ನೂ ಜನರ ದಿಕ್ಕು ತಪ್ಪಿಸುವ ಕಾಯಕದಲ್ಲಿ ನಿರತವಾಗಿದೆ ಜನರು ಬಿಜೆಪಿಗೆ ಮತ ಹಾಕಿ ಕೈ ಹಿಸುಕಿಕೊಳ್ಳುತ್ತಾ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ನಿನ್ನೆ ಬಂದ ರಾಜ್ಯದ ಹತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಡಳಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಸ್ವ ಹಿತಾಸಕ್ತಿ ಹಾಗೂ ಜನರ ಸಾವಿನ ಜೊತೆ ಬಿಜೆಪಿ ಪಕ್ಷವು ರಾಜಕೀಯ ಮಾಡುತ್ತಿದ್ದು ಜನರೆಲ್ಲಾ ಬೇಸತ್ತು ಕಾಂಗ್ರೆಸ್ ಪಕ್ಷದ ಕೈಹಿಡಿದಿದ್ದಾರೆ ರಾಜ್ಯದ ಸ್ಥಳೀಯ ಚುನಾವಣೆಯಲ್ಲಿ ಬಹುಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಮುಂಬರುವ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತನಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಬಹುಮತದಿಂದ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ಹೇಳಿದರು ಈಗಾಗಲೇ ಭಾರತ ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಿನ ದಿನಗಳನ್ನು ನೆನಪಿಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತದೆ ಎಂದು ಅನೀಲ ಕುಮಾರ ಜಮಾದಾರ್ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪಾಟೀಲ ಮೋತಕಪಲ್ಲಿ. ಅಬ್ದುಲ್ ಬಾಸಿತ್. ಜಗನ್ನಾಥ ಗುತ್ತೇದಾರ. ಅನ್ವರ್ ಖತೀಬ್. ಗಂಗಾಧರ ಗಡ್ಡಿಮನಿ. ವಿಶ್ವನಾಥ್ ಹೊಡೆಬೀರನಳ್ಳಿ. ನಾಗೇಶ್ ಗುಣಾಜಿ. ಇದ್ದರು