
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಏ12: ವಿಜಯನಗರದ ಬಿಜೆಪಿ ಅಭ್ಯರ್ಥಿಯೆಂದು ಘೋಷಣೆಯಾಗುತ್ತಿದ್ದಂತೆಯೇ ತುಂಗಭದ್ರತೆಯ ಪುಣ್ಯಸಾನ್ನ ಹಾಗೂ ಕ್ಷೇತ್ರಾಧಿಪತಿ ವಿರೂಪಾಕ್ಷೇಶ್ವರನ ದರ್ಶನದೊಂದಿಗೆ ಚುನಾವಣಾ ಕಣಕ್ಕೆ ಧುಮಿಕಿದ್ದಾರೆ ಘೋಷಿತ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥಸಿಂಗ್ ಮೊದಲಿನಿಂದಲೂ ತಂದೆಯಂತೆ ಕ್ಷೇತ್ರಾಧಿಪತಿ ವಿರೂಪಾಕ್ಷೇಶ್ವರ ನಾಡತಾಯಿ ಭುವನೇಶ್ವರಿ ಹಾಗೂ ಪಂಪಾಂಭಿಕೆಯರ ದರ್ಶನ ಪಡೆದು ವಿದ್ಯುಕ್ತವಾಗಿ ಚುನಾವಣಾ ಪ್ರಚಾರಕ್ಕೆ ಅಣಿಯಾದರು. ಬೆಳಂಬೆಳಿಗ್ಗೆ ತುಂಗಭದ್ರಯಲ್ಲಿ ಪುಣ್ಯಸ್ನಾನ ಮಾಡಿ ದರ್ಶನ ಪಡೆದ ಅವರು ತಂದೆಯಂತೆಯೇ ಟೆಂಪಲ್‍ರನ್ ಹಾಗೂ ನಾಯಕರ ಭೇಟಿ ಮಾಡಲು ಆರಂಭಿಸುವ ಪೂರ್ವದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡರು.
ಮೊದಲಿನಿಂದಲೂ ಸಮಾಜಸೇವೆ ನನ್ನ ಹವ್ಯಾಸ, ತಂದೆ ತಾಯಿರ ಮಾರ್ಗದರ್ಶನ ಇಂತಹ ಕಾರ್ಯಕ್ಕೆ ಕಾರಣ, ಅವು ಇನ್ನು ಮುಂದೆ ನನ್ನ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದರು. ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅವಧಿಯಲ್ಲಿ ವಿಜಯ ಸಾಧಿಸಿದ್ದು, ನನ್ನ ತಂದೆ ಮಾಡಿದ ಸಮಾಜಮುಖಿ ಕಾರ್ಯ ಹಾಗೂ ಕ್ಷೇತ್ರದ ಅಭಿವೃದ್ದಿ ನನಗೆ ಪ್ರೇರಣೆ, ಬಿಜೆಪಿ ಟಿಕೆಟ್ ದೊರೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ತಂದೆಯ ಹಾಗೂ ನಿಷ್ಠಾವಂತ ಕಾರ್ಯಕರ್ತರ ಬೆಂಬಲ ಮಾರ್ಗದರ್ಶನ ನನಗೆ ಶ್ರೀರಕ್ಷೆಯಾಗಲಿದೆ ಎಂದರು.
ತಂದೆಯ ಕಾರ್ಯಗಳನ್ನು ಮುಂದುವರೆಸುವ ಹಾಗೂ ಅವರ ಅಣತಿಯಂತೆ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರಿಂದಲೂ ಸಲಹೆ ಪಡೆದು ಮುನ್ನಡೆಯುವೆ ಎಂದು ನನ್ನನು ಬೆಂಬಲಿಸುವಂತೆ ಕೋರಿದರು.
ಸಚಿವ ಆನಂದಸಿಂಗ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಬಿಜೆಪಿ ಘೋಷಿತ ಅಭ್ಯರ್ಥಿ ಸಿಧಾರ್ಥಸಿಂಗ್‍ರೊಂದಿಗೆ ಪಾಲ್ಗೊಂಡಿದ್ದರು.
ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ
ಹೊಸಪೇಟೆ: ಮಾಜಿ ಶಾಸಕ ಹೆಚ್.ಆರ್. ಗವಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಸರಿಯಷ್ಟೇ… ಹಿ ಇಸ್‍ಯೇ ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ.. ಎಂದು ಸಚಿವ ಆನಂದಸಿಂಗ್ ಅಭಿಪ್ರಾಯಪಟ್ಟರು.
ಹಂಪಿಯಲ್ಲಿ ಪುತ್ರ ಸಿಧಾರ್ಥಸಿಂಗ್‍ಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ತುಂಗಭದ್ರಾ ಪುಣ್ಯಸ್ನಾನ ಮಾಡಿ ಹಂಪಿಯ ವಿರೂಪಾಕ್ಷೇಶ್ವರನ ದರ್ಶನ ಪಡೆದ ಅವರು ಮಗನೊಂದಿಗೆ ದರ್ಶನ ಮಾಡಿ ಸುದ್ಧಿಗಾರರೊಂದಿಗೆ ಮಾತನಾಡಿದರು. ಗವಿಯಪ್ಪ ತುಂಬಾ ಒಳ್ಳೆಯ ವ್ಯಕ್ತಿ ಒಳ್ಳೆಯ ವ್ಯಕ್ತಿ ಆದರೆ ಉಪಯೋಗವಿಲ್ಲಾ ರಾಂಗ್ ಪಾರ್ಟಿಯಲ್ಲಿದ್ದಾರೆ ಎಂದು ಎದುರಾಳಿಯಾದರೂ ಅವರ ಒಳ್ಳಯತನವನ್ನು ಸಚಿವ ಆನಂದ್‍ಸಿಂಗ್ ಕೊಂಡಾಡಿದರು.