ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 51 ಕೋಟಿ ರೂಪಾಯಿ ಒಡೆಯ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.17:ಹಾಲಿ ಸಂಸದ ಹಾಗೂ ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಒಟ್ಟು 51,63,15,994 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಚರಾಸ್ಥಿ: ನಗದು 90 ಸಾವಿರ ರೂ., ಬ್ಯಾಂಕ್‍ಗಳಲ್ಲಿ ಹೂಡಿಕೆ, ಹಂಪಿ ಹೆರಿಟೇಜ್ ವೈನ್ ಯಾರ್ಡ್‍ಗೆ 1,11,80,805 ರೂ, ಜಿಗಜಿಣಗಿ ಜಗತಾಪ ಪ್ರೈಲಿಗೆ 8,47,08,654 ರೂ. ಹಾಗೂ 10,50,16,960 ರೂ. ಹೂಡಿಕೆ, ಶೇರ್ ಮಾರುಕಟ್ಟೆ ಇತರೆ ಸಂಸ್ಥೆಗಳಲ್ಲಿ ಹೂಡಿಕೆ ಹಾಗೂ 13 ಲಕ್ಷ ರೂ.ಮೌಲ್ಯದ 1 ಕಾರ್, 6 ಲಕ್ಷ ರೂ.ಮೌಲ್ಯದ 10 ತೊಲಾ ಬಂಗಾರ, 1,16,200 ರೂ.ಬೆಲೆಯ 3ಕೆಜಿ ಬೆಳ್ಳಿ ಸೇರಿದಂತೆ 24,58,13,690 ರೂ.ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.
ಸ್ಥಿರಾಸ್ಥಿ: ಬೆಂಗಳೂರಿನಲ್ಲಿ ಕೃಷಿ ಭೂಮಿ, ತವರು ಜಿಲ್ಲೆಯಲ್ಲಿ ಕೃಷಿ ಭೂಮಿ, ಭೂತನಾಳದಲ್ಲಿ ಕೃಷಿಯೇತರ ಭೂಮಿ, ಅಭಿವೃದ್ಧಿ ನಿರ್ಮಾಣಕ್ಕೆ ವಿನಿಯೋಗ, ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್, ವಸತಿ ಕಟ್ಟಡ ಸೇರಿದಂತೆ 27,05,02,304 ರೂ.ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಹಾಗೆಯೇ 6,81,16,765 ರೂ.ಸಾಲ ಹೊಂದಿದ್ದಾರೆ. ಕುಟುಂಬ ಸದಸ್ಯರ ಹೆಸರಲ್ಲಿ ಯಾವುದೇ ಆಸ್ತಿ ಹೊಂದಿಲ್ಲ.