ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದೆ ಎಳ್ಳು ನೀರು ಬಿಟ್ಟ ನಳಿನ್ ಕಟೀಲ್

ಲಿಂಗಸುಗೂರು,ಫೆ.೨೬- ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿಯಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ನಿನ್ನೆ ನಡೆದ ವಿಜಯ ಸಂಕಲ್ಪಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ, ಲಿಂಗಸುಗೂರು ಮೀಸಲು ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಘೋಷಣೆ ಮಾಡದೆ ಎಳ್ಳುನೀರು ಬಿಟ್ಟಿದ್ದಾರೆ. ಇದರಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್‌ರವರಿಗೆ ತಳಮಳ ಶುರುವಾಗಿದೆ.
ವಿಜಯ್ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಜನರನ್ನು ಸೇರಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಲು ಮತ್ತೊಮ್ಮೆ ಕ್ಷೇತ್ರದಲ್ಲಿ ವಿಜಯಶಾಲಿಯಾಗಿ ಮಾಡಲು ಅವಕಾಶ ನೀಡಬೇಕು ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್‌ರವರು ಹೇಳಿದರು.
ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಸಮಾರಂಭ ಕಾರ್ಯಕ್ರಮದ ಉದ್ದಕ್ಕೂ ಕೇವಲ ಬಿಜೆಪಿ ಪಕ್ಷದ ಗುರುತು ಕಮಲದ ಹೂವಿಗೆ ಮತ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಮೂಲಕ ಜನಪರ ಆಡಳಿತ ನೀಡಲು ಸಹಕರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆದರೆ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಎಲ್ಲೂ ಹೇಳಿಲ್ಲ ಕ್ಷೇತ್ರದಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್‌ರವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡದೆ ಇದ್ದುದು ನೋಡಿದರೆ ಬಹುತೇಕವಾಗಿ ಮಾಜಿ ಶಾಸಕರಿಗೆ ಟಿಕೆಟ್ ಕಟ್ಟಾಗುತ್ತದೆ ಎಂದರೆ ತಪ್ಪಾಗಲಾರದು.
ಮೀಸಲು ಕ್ಷೇತ್ರಕ್ಕೆ ಯಾರು ಉತ್ತರಾಧಿಕಾರಿ ಎನ್ನುವ ಪ್ರಶ್ನೆ ಉದ್ಭವಿಸಿದೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದೆ ಇರುವ ಹಿನ್ನೆಲೆಯಲ್ಲಿ ವಿಧಾನಸಭೆಗೆ ಮೂಲ ಅಸ್ಪುಶ್ಯರಿಗೆ ಟಿಕೆಟ್ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಲು ಮುಂದಾಗುತ್ತದೆ ಎಂಬುದು ಬಿಜೆಪಿ ವಲಯದಲ್ಲಿ ಇಂಥದ್ದೊಂದು ಚರ್ಚೆ ಶುರುವಾಗಿದೆ.
ಬಹುತೇಕ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂಬುದು ಈಗಾಗಲೇ ಎಲ್ಲಾಕಡೆ ಬಹು ಚರ್ಚಿತ ವಿಷಯವಾಗಿದೆ. ಇದರಿಂದ ತಾಲೂಕಿನ ಬಿಜೆಪಿ ಪಕ್ಷದ ಶಾಸಕರು ಯಾರು ಅಂತ ಕ್ಷೇತ್ರದಲ್ಲಿ ಮಾತು ಕೇಳಿ ಬರುತ್ತಿದೆ. ಬಿಜೆಪಿ ಹೈಕಮಾಂಡ್ ಮೂಲ ಅಸ್ಪುಶ್ಯರಿಗೆ ಅಥವಾ ಮಾಜಿ ಶಾಸಕ ಮಾನಪ್ಪ ವಜ್ಜಲ್‌ರಿಗೆ ಟಿಕೆಟ್ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.
ಆದರೂ ಮಾಜಿ ಶಾಸಕರ ವಿರುದ್ಧ ಹೈಕಮಾಂಡ್‌ನಲ್ಲಿ ಒಳ ಒಳಗೇ ಬೇಗುದಿ ಜಾಸ್ತಿಯಾಗಿದ್ದು, ಇದರಿಂದ ಟಿಕೆಟ್ ಘೋಷಣೆ ಮಾಡದೆ ಇದ್ದುದು ನೋಡಿದರೆ ಬಹುಶಃ ಟಿಕೆಟ್ ಕಟ್ಟಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂಬುವುದರಲ್ಲಿ ಸಂಶಯವಿಲ್ಲ.