ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡನಾಯಕ ಪರವಾಗಿ ಮತಯಾಚನೆ

ಅರಕೇರಾ,ಮೇ.೦೭- ದೇವದುರ್ಗ ವಿಧನಸಭಾ ಕ್ಷೇತ್ರಾದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡನಾಯಕ ಪರವಾಗಿ ಅವರ ಚಿಕ್ಕಪ್ಪನಾದ ಕೆ.ಅನಂತರಾಜನಾಯಕ ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಇಂದು ಬಿ.ಗಣೇಕಲ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ಬಳಿಕ ಮಾತನಾಡಿದ ಕೆ.ಅನಂತರಾಜನಾಯಕ ಕ್ಷೇತ್ರದ ಅಭಿವೃದ್ದಿಗೆ ರಾಜ್ಯ ಸರಕಾರದಿಂದ ಸಾಕಷ್ಟು ಅನುದಾನ ತಂದು ಈಗಾಗಲೇ ಸಾವಿರಾರುಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು, ರಸ್ತೆಗಳು, ಸಿಸಿರಸ್ತೆಗಳು, ಶಾಲೆ ಕಟ್ಟಡಗಳು, ದೇವಸ್ಥಾನ ನಿರ್ಮಾಣ, ಅಂಗನವಾಡಿ ಕಟ್ಟಡ ಸೇರಿದಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆಂದು ಹೇಳಿದರು.ನಿಮ್ಮ ಸಮ್ಯಸೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ದಿಕಾರ್ಯಗಳಿಗೆ ಹೆಚ್ಚು ಗಮನಹರಿಸುತ್ತಿರುವ ಶಾಸಕ ಕೆ.ಶಿವನಗೌಡನಾಯಕ ಅವರು ಮತ್ತೇ ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ ಅವರಿಗೆ ಮತ್ತೋಮ್ಮೆ ಮತ ನೀಡಿ ಗೆಲ್ಲಿಸಿ ಶಾಸಕರನ್ನಾಗಿ ಆಯ್ಮೆ ಮಾಡಿರಿ ಎಂದು ಮತದಾರರಿಗೆ ಮನವಿಮಾಡಿಕೊಂಡರು.