ಬಿಜೆಪಿ ಅಭ್ಯರ್ಥಿ ಎಂ ಎಸ್. ಸೋಮಲಿಂಗಪ್ಪ ನಾಮಪತ್ರ ಸಲ್ಲಿಕೆ


ಸಿರುಗುಪ್ಪ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಎಂ.ಎಸ್. ಸೋಮಲಿಂಗಪ್ಪ ಅಪಾರ ಬೆಂಬಲಿಗರೊಂದಿಗೆ ಇಂದು ನಾಮಪತ್ರ ಸಲ್ಲಿಸಿದರು.
ನಗರದ ತಾಲ್ಲೂಕು ಕ್ರಿಡಾಂಗಣದಿಂದ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧೀ ವೃತ್ತದ ಮೂಲಕ ಸಂಚರಿಸಿ ಚುನಾವಣಾಧಿಕಾರಿಗಳ ಕಛೇರಿ ತಲುಪಿ ನಾಮಪತ್ರ ಸಲ್ಲಿಸಿದರು.