ಬಿಜೆಪಿ ಅಭ್ಯರ್ಥಿಯಿಂದ‌ ಬಂಜಾರ ಸಮುದಾಯದ ಹಿತಾಸಕ್ತಿ ಬಲಿ : ಆರೋಪ

ದಾವಣಗೆರೆ.ಮೇ.೨: ಮಾಯಕೊಂಡ ಬಿಜೆಪಿ ಅಭ್ಯರ್ಥಿ ಎಂ.ಬಸವರಾಜನಾಯ್ಕ ರಾಜಕೀಯ ವ್ಯಕ್ತಿ ಹಿತಾಸಕ್ತಿಗೆ ಇಡೀ ಬಂಜಾರ ಸಮುದಾಯವನ್ನು ಬಲಿ ಕೊಡುತ್ತಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಮತ‌ ಚಲಾಯಿಸುವಂತೆ ಕಾಂಗ್ರೆಸ್ ಮುಖಂಡ ಎಲ್.‌ಕೊಟ್ರೇಶ್ ನಾಯ್ಕ ಕರೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 25ನೇ ಮಾರ್ಚ್ 2023 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕಣ ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿರುವ ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು.ಸರ್ಕಾರ ಶೇ.4.5ರಷ್ಟು ಒಳ ಮೀಸಲಾತಿ ಮಾಡಿರುವುದನ್ನು ಎಂ.ಬಸವರಾಜನಾಯ್ಕ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಬಸವರಾಜ್ ನಾಯ್ಕ, ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿ ಇದೆ ಎಂದು ತನ್ನ ವ್ಯಕ್ತಿ ಲಾಭಕ್ಕಾಗಿ ಮತ್ತು ಬಿಜೆಪಿ ಟಿಕೆಟ್ ಪಡೆಯಲು ಈ ಹೇಳಿಕೆ ನೀಡಿದ್ದು, ಬಂಜಾರ  ಸಮುದಾಯವನ್ನು ತಪ್ಪು ದಾರಿಗೆ ಸೆಳೆಯುವ ದುರುದ್ದೇಶ ಹೊಂದಿದ್ದು, ಸಮಾಜದ ಜನರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೇ 10ರಂದು ಮತ ಚಲಾಯಿಸುವಾಗ ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಿ, ಕಾಂಗ್ರೆಸ್ ಪರವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಚಂದ್ರ ಶೇಖರ ನಾಯ್ಕ ಜಮ್ಮಾಪುರ, ದೇವ್ಲಾನಾಯ್ಕ ಚಿನ್ನಸಮುದ್ರ, ಪಿ.ಕಾಶೀನಾಥ್ ಇತರರು ಇದ್ದರು.