ಬಿಜೆಪಿ ಅಭ್ಯರ್ಥಿಪರ ನಗರ ಶಾಸಕರ ಪ್ರಚಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ನ.27-  ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ವೈ.ಎಂ. ಸತೀಶ್ ಅವರ ಪರವಾಗಿ ಬಳ್ಳಾರಿ ತಾಲೂಕಿನ ಸಂಗನಕಲ್ಲು, ಸಿರಿವಾರ, ವಣೇನೂರು, ಯರ್ರಗುಡಿ, ಸಿಂಧವಾಳ, ಕಾರೇಕಲ್ಲು, ಶಿಡಿಗಿನಮೊಳ, ಚೆಳಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಭೆ ಸೇರಿ ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ,ಮಾಜಿ ಸಂಸದ ಸಣ್ಣ ಫಕೀರಪ್ಪ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನ ಗೌಡ, ಗ್ರಾಮಾಂತರ ಕ್ಷೇತ್ರದ ಅಧ್ಯಕ್ಷ ಹಲಕುಂದಿ ಮಲ್ಲಿಕಾರ್ಜುನ ಗೌಡ, ಮುಖಂಡ ಕೆ.ಪ್ರಕಾಶ್,ಲೋಕೇಶ್ ರೆಡ್ಡಿ,ಓಂಪ್ರಕಾಶ್‍ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು-ಉಪಾಧ್ಯಕ್ಷರು ಸದಸ್ಯರು ಮುಖಂಡರು ಕಾರ್ಯಕರ್ತರು ಭಾಗವಹಿಸಿದರು.