ಬಿಜೆಪಿ ಅಭ್ಯರ್ಥಿಗಳ ಪರ  ಪ್ರಚಾರಕ್ಕೆ ಬಂದತೆಲಂಗಾಣದ ಮೋದಿ ಅಭಿಮಾನಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.21: ನಗರದಲ್ಲಿ ನಿನ್ನೆಯಿಂದ ಪ್ರಧಾನಿ ಮೋದಿ ಅವರ ತೆಲಂಗಾಣದ ಅಭಿಮಾನಿ ಪ್ರಸಕ್ತ ಚುನಾವಣೆಯಲ್ಲಿ ಬಿಜರಪಿ ಅಭ್ಯರ್ಥಿಗಳಾದ ನಗರದ ಕ್ಷೇತ್ರದ ಗಾಲಿ ಸೋಮಶೇಖರ ರೆಡ್ಡಿ ಮತ್ತು ಗ್ರಾಮೀಣ ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ಮಾಡಲು ಬಂದಿದ್ದಾನೆ.
ನೆರೆಯ ತೆಲಂಗಾಣದ ನಲವಂಡ ಜಿಲ್ಲೆಯ ನಾಗಾರ್ಜುನ ಸಾಗರ ಕ್ಷೇತ್ರದ ಕಂಪಾಲಪಲ್ಲಿ ಗ್ರಾಮದಿಂದ
 420 ಕಿ.ಮೀ. ದೂರದ  ಬಳ್ಳಾರಿ ನಗರದಕ್ಕೆಸೈಕಲ್ ಮೂಲಕ  ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ಗಮನ ಸೆಳೆದಿದ್ದಾನರ
ಈತ ಬಿಎ ಬಿಇಡಿ ಪದವೀಧರ, ಹೆಸರು ಶಿವನೇನಿ ದಶರಥ.  ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿ ಜೊತೆಗೆ ಎಲ್ಲ ವರ್ಗದವರು ನೆಮ್ಮದಿ ಜೀವನ ನಡೆಸಲು ಮಾದರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದು, ಡಬಲ್ ಎಂಜಿನ್ ಸರ್ಕಾರ ಮಾದರಿ ಯೋಜನೆಗಳನ್ನು ಜಾರಿಗೊಳಿಸಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎನ್ನುವ ಸಂಕಲ್ಪದೊಂದಿಗೆ ಸೈಕಲ್‌ಗೆ ಹಿಂದೆ ಮುಂದೆ ಬಿಜೆಪಿ ಧ್ವಜ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾನೆ ಈ ಶಿವನೇನಿ
ಪ್ರಧಾನಿ ಮೋದಿ ಅವರು ದೇಶವನ್ನು ನಾನಾ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಇಡೀ ವಿಶ್ವವವೇ ಭಾರತದ ಕಡೆ ತಿರುಗಿನೋಡುವಂತೆ ಮಾಡಿದ್ದಾರೆ. ಮೋದಿ ಅವರು ವ್ಯಕ್ತಿಯಲ್ಲ, ಅವರೊಬ್ಬ ದೇಶದ ಶಕ್ತಿ ಇದ್ದಂತೆ. ಅವರ ಕೈ ಬಲಪಡಿಸಲು ಮತ್ತೊಮ್ಮೆ ರಾಜ್ಯದಲ್ಲೂ ಕಮಲ ಅರಳಬೇಕು ಎನ್ನುತ್ತಾನೆ.