
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ನಗರದ 4ನೇ ವಾರ್ಡ್ ನ ಬಂಡಿಮೋಟ ಪ್ರದೇಶದ ಸುಲೇಮಾನ್ ಸ್ಟ್ರೀಟ್, ವಡ್ಡಿಗೇರಿ, ಕೊರಚಾ ಸ್ವೀಟ್ ಪ್ರದೇಶಗಳಲ್ಲಿ ನಗರ ಶಾಸಕ, ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿದರು.
ನಗರದಲ್ಲಿ ಈವರಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಬಗ್ಗೆ ಜನರಿಗೆ ತಿಳಿಸುತ್ತ. ಬಿಜೆಪಿ ಸರ್ಕಾರವು ಅಭಿವೃದ್ಧಿಪರ ಇದೆ ಎಂದು ಜನರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ಮುಖಂಡರಾದ ಗಾದಿಲಿಂಗ, ಗೋಪಿ, ವಡ್ಡೆ ಹನುಮಂತ, ಶೇಖಣ್ಣ, ಕಲೀಮ್, ನಾಸಿರ್, ವಿನೋದ್, ಹಾಗೂ
ವಾರ್ಡಿನ ಪ್ರಮುಖ ಮುಖಂಡ ಹಾಗೂ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.