ಬಿಜೆಪಿ ಅಧ್ಯಕ್ಷರ ಭೇಟಿ ಮಾಡಿದ ಗಣಪಾಲ್ ಐನಾಥರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18: ನಗರದಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಮಾಡಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಅವರನ್ನು ಇಂದು ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ತಿಪಟೂರಿಗೆ ತೆರಳುವ ಮುನ್ನ ಬಿಜೆಪಿಯ ಜಿಲ್ಲಾ ವಿಶೇಷ ಆಹ್ವಾನಿತ, ರೈತ ಜಿಲ್ಲಾ ಮೋರ್ಚಾದ ಹಾಗೂ  ತಾಲೂಕು ಪಂಚಾಯ್ತಿಯ  ಮಾಜಿ ಅಧ್ಯಕ್ಷ ಗಣಪಾಲ್ ಐನಾಥ್ ರೆಡ್ಡಿ ಅವರು ಭೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚನೆ ನಡೆಸಿದರು.
ಪಕ್ಷದ ಇಬ್ಬರೂ ಅಧ್ಯಕ್ಷರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಟಿ ಬದ್ದರಾಗಿ  ಶ್ರಮಿಸಲು ಸೂಚನೆ ನೀಡಿದ್ದಾರಂತೆ.