ಬಿಜೆಪಿ ಅಧಿಕಾರ ವಿರುದ್ದ ಮತ ಹಾಕಿದವರಿಗೆ ಶಿಸ್ತು ಕ್ರಮ

ಸಿರವಾರ.ನಂ.07- ಸಿರವಾರ ಪಟ್ಟಣ ಪಂಚಾಯತಿ ಮತ್ತೆ ಬಿಜೆಪಿ ವಶವಾಗಿರುವುದಕ್ಕೆ ಸಂತೋಷವಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದವರಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡಿದರೂ ಉಲ್ಲಂಘನೆ ಮಾಡಿರುವ 5 ಸದಸ್ಯರ ಮೇಲೆ ಜಿಲ್ಲಾಧ್ಯಕ್ಷರು ಶಿಸ್ತು ಕ್ರಮ ಕೈಗೊಳ್ಳುವರು ಎಂದು ಸಂಸದ ರಾಜಾ ಅಮರೇಶ ನಾಯಕ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿ, ನಂತರ ಮಾತನಾಡಿದ ಅವರು ಎಲ್ಲಾರಿಗೂ ಅಧಿಕಾರದ ಆಸೆ ಇರುತ್ತದೆ. ಅದರೆ, ಕೆಲವರಿಗೆ ಮಾತ್ರ ದೊರೆಯುತ್ತದೆ. ಅಧಿಕಾರ ಹಿಡಿಯಲು ಕೆಲ ನೀತಿ, ನಿಯಮಗಳಿವೆ.
ಪಕ್ಷಗಳಿಗೆ ತಮ್ಮದೇ ಆದ ಸಿದ್ದಾಂತಗಳಿರುತ್ತವೆ, ಅವುಗಳಿಗೆ ಎಲ್ಲಾರೂ ಬದ್ಧರಾಗಿರಬೇಕು. ವೀಪ್ ಉಲ್ಲಂಘನೆ ಮಾಡಿರುವ 5 ಜನ ಸದಸ್ಯರ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷರು ಶಿಸ್ತು ಕ್ರಮಕೈಗೊಳ್ಳುವರು ಜಿಲ್ಲೆಯ ಸಮಗ್ರ ಅಭವೃದ್ದಿಗೆ ಬದ್ಧನಾಗಿರುವ, ಆ ಭಾಗ ಭೇಟಿ ಕೊಟ್ಟಿಲ್ಲಾ ಈ ಭಾಗಕ್ಕೆ ಭೇಟಿ ಕೊಟ್ಟಲ್ಲ ಎಂಬ ಆರೋಪ ನಿರ್ಧಾರವಾಗಿದೆ. 5 ಜನ ಸದಸ್ಯರು ಬಂಡಾಯ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹಿಂದೆ ಎಂಎಲ್ಎ ಚುನಾವಣೆಯಲ್ಲಿ ವಾರ್ಡ್ ನಂ.2 ಕೃಷ್ಣ ನಾಯಕ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿದರು ಅವರ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ ಎಂದು ಕೇಳಿದರೆ.
ಆ ವಿಷಯ ಹಳೇಯ ವಿಚಾರ ನಾನು ಮಾತನಾಡುವುದಿಲ್ಲ. ನೂತನ ಅಧ್ಯಕ್ಷ ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಶ್ರಮಿ ಎಂದರು.
ಈ ಸಂದರ್ಭದಲ್ಲಿ ಜೆ.ಶರಣಪ್ಪ ಗೌಡ, ಮಾಜಿ ಶಾಸಕರಾದ ಗಂಗಾಧರ ನಾಯಕ ಬ್ಯಾಗವಾಟ ಬಸನಗೌಡ, ಮಾನಪ್ಪನಾಯಕ್, ಶರಣಪ್ಪ ನಕ್ಕುಂದಿ, ತಿಮ್ಮರೆಡ್ಡಿ ಭೋಗಾವತಿ, ತಾ.ಪಂ ಅಧ್ಯಕ್ಷ ದೇವರಾಜ ಕುರಕುಂದಿ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜೆ.ದೇವರಾಜಗೌಡ, ನಾಗರಾಜಗೌಡ, ಲತಾ ಗುರುನಾಥರೆಡ್ಡಿ, ಸಂದೀಪ್ ಪಾಟೀಲ್, ಕೃಷ್ಣನಾಯಕ, ಮೌಲಾಸಾಬ್ ಗಣದಿನ್ನಿ, ಸಿದ್ದರಾಮಯ್ಯ ಸ್ವಾಮಿ, ನರಸಿಂಹ ರಾವ್ ಕುಲಕರ್ಣಿ, ಚನ್ನಪ್ಪ ಚನ್ನೂರು, ರಮೇಶ ಚಿಂಚರಕಿ, ದೇವರಾಜ ಹೀರೆಮಠ್, ಉದಯಕುಮಾರ, ಹೆಚ್.ಕೆ ಅಮರೇಶ, ವಸಂತನಾಯಕ ಸೇರಿದಂತೆ ಇನ್ನಿತರರು ಇದ್ದರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.