ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಿನ ತೆರಿಗೆ ಕಡಿತ ಮತದಾರರಿಗೆ ಶಾಸಕ ಸೋಮಶೇಖರ ರೆಡ್ಡಿ ಭರವಸೆ

ಬಳ್ಳಾರಿ, ಏ.23: ಕಳೆದ ಬಾರಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಸಮರ್ಪಕವಾಗಿ ನೀರು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲದೆ ನೀರಿನ ತೆರಿಗೆಯನ್ನು ಸಹ ತಿಂಗಳಿಗೆ 100 ರೂ ನಿಂದ 175 ರೂ ಗೆ ಹೆಚ್ಚಿಸಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ನೀರಿನ ತೆರಿಗೆಯನ್ನು ಮತ್ತೆ ತಿಂಗಳಿಗೆ 100 ರೂಗೆ ಇಳಿಸಿಲಿದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಮತದಾರರಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮನವಿ ಮಾಡಿದರು.
ಅವರು ಇಂದು ಬೆಳಂ ಬೆಳಿಗ್ಗೆ ನಗರದ 1 ನೇ ವಾರ್ಡಿನಲ್ಲಿ ಅಭ್ಯರ್ಥಿಯೊಂದಿಗೆ ಸಂಚರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು, ತರಕಾರಿ ಮೊದಲಾದವುಗಳನ್ನು ಖರೀದಿ ಮಾಡುತ್ತಿದ್ದ ಮಹಿಳೆಯರು. ಮನೆಯಲ್ಲಿದ್ದ ಮತದಾರರನ್ನು ಭೇಟಿ ಮಾಡಿ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲ ಅಭಿವೃದ್ದಿ ಮಾಡಲಿದೆ ಎಂಬ ಪ್ರಣಾಳಿಕೆಯ ಕರಪತ್ರವನ್ನು ನೀಡಿದರು.
ನೀರು ಮನುಸ್ಯನ ಅತ್ಯವಶ್ಯಗಳಲ್ಲಿ ಒಂದು. ಅದಕ್ಕಾಗಿ ದಿನ ನಿತ್ಯ ಬದುಕಿಗೆ ಅವಶ್ಯವಾದಷ್ಟು ನೀರನ್ನು ಸರಬರಾಜು ಂಆಡಲು 24*7 ಯೋಜನೆಯನ್ನು ಜಾರಿಗೆ ತರಲಿದೆ. ಅದಕ್ಕಾಗಿ ಅಗತ್ಯವಾದ ಬಾಕಿ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರವೂ ಮುಂದಾಗಿದೆಂದು ಹೇಳಿದರು.ಶಾಸಕರು ನೀರಿನ ಕರ ಕಡಿಮೆ ಮಾಡುವ ಭರವಸೆ ಕೇಳಿದ ಮತದಾರರು ಖುಷಿ ಪಟ್ಟರು.