ಬಿಜೆಪಿ,ಸಂಘ ಪರಿವಾರದ ದ್ವೇಷದ ರಾಜಕಾರಣದಿಂದ ದೇಶ ಹೊತ್ತಿ ಉರಿಯುತ್ತಿದೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.5: ಸಂಘಪರಿವಾರ ಹರಡಿದದ್ವೇಷದ ನಂಜಿನ ಪರಿಣಾಮಇಡೀದೇಶವೇ ಹೊತ್ತಿಉರಿಯುತ್ತಿದೆ. ಮಣಿಪುರದಲ್ಲಿಜಾನಾಂಗೀಯ ಕಲಹ, ಹರಿಯಾಣಾದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿಖPಈಯೋಧನ ಕೋಮು ದ್ವೇಷಕ್ಕೆರೈಲಿನಲ್ಲಿಅಮಾಯಕರ ಬಲಿ ಸೇರಿದಂತೆದೇಶದ ನಾನಾ ಭಾಗಗಳಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆಕಾರಣವಾದ ಬಿಜೆಪಿ ಮತ್ತು ಸಂಘಪರಿವಾರದದ್ವೇಷದರಾಜಕಾರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಆಫ್‍ಇಂಡಿಯಾರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಮೂಲಕ ತೀವ್ರವಾಗಿ ಖಂಡಿಸಿದೆ.
ಬಿಜೆಪಿ ಪಕ್ಷಕ್ಕೆ ಹಿಂಸಾಚಾರ, ಕೋಮು ದ್ವೇಷರಾಜಕೀಯಅಸ್ತ್ರವಾಗಿದೆ. ಆ ಕಾರಣಕ್ಕಾಗಿಯೇ ಮೂರು ತಿಂಗಳಿಂದ ಮಣಿಪುರ ಹೊತ್ತಿಉರಿಯುತ್ತಿದ್ದರೂಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿಒಂದೇಒಂದು ಪ್ರಯತ್ನವನ್ನೂ ಮೋದಿ ನೇತೃತ್ವದ ಸರ್ಕಾರ ಮಾಡಲಿಲ್ಲ. ಪ್ರಧಾನಿಯಾಗಿರುವ ಮೋದಿ ಅಲ್ಲಿನಜನರಿಗೆ ಶಾಂತಿಕಾಪಾಡಿಎಂದು ಹೇಳುವ ತಮ್ಮಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ. ಮಣಿಪುರ ಎಂಬ ಪದ ಬಳಸಲೂ ಹಿಂಜರಿದರು. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತುಅತ್ಯಾಚಾರ ಪ್ರಕರಣ ಹೊರ ಬಂದಾಗ ವಿಧಿ ಇಲ್ಲದೆ ಮಣಿಪುರದ ಬಗ್ಗೆ ಮೋದಿ ಮಾತನಾಡಿದರಾದರೂಅವರ ಮಾತಿನಲ್ಲಿಘಟನೆಯಕುರಿತು ವಿಷಾದಅಥವಾ ನೋವಿಗಿಂತ ಹೆಚ್ಚಾಗಿ, ಈ ಘಟನೆಯಿಂದತಮ್ಮಇಮೇಜಿಗೆಧಕ್ಕೆಯಾಗಿದೆಅನ್ನುವ ಸಿಟ್ಟು ಎದ್ದುಕಾಣುತ್ತಿತ್ತು.
ಇನ್ನು ಹರಿಯಾಣಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಗೋ ರಕ್ಷಣೆ ಹೆಸರಿನಲ್ಲಿಅಮಾಯಕರನ್ನುಕೊಂದುತಲೆ ಮರೆಸಿಕೊಂಡಿರುವ ಮೋನು ಮನೇಸರ್ ಹರಿಬಿಟ್ಟ ಪ್ರಚೋದನಕಾರಿ ವೀಡಿಯೊ ಮತ್ತುಅಲ್ಪಸಂಖ್ಯಾತ ಸಮುದಾಯಕ್ಕೆಆತ ಹಾಕಿದ ಸವಾಲು ಮುಖ್ಯಕಾರಣವಾಗಿದೆ.ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂಅಲ್ಲಿನ ಪೆÇಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರು.ಅಲ್ಲಿ ಮಸೀದಿಗಳಿಗೆ ಬೆಂಕಿ ಹಚ್ಚಿಒಬ್ಬರು ಗುರುಗಳನ್ನು ಕೊಲೆ ಮಾಡಲಾಗಿದೆ ಮತ್ತು 5 ಮಂದಿ ಅಮಾಯಕರುಜೀವತೆತ್ತಿದ್ದಾರೆ.
ದೇಶದಎಲ್ಲೆಡೆ ಹಬ್ಬಿದದ್ವೇಷದ ವಿಷರೈಲ್ವೆ ಭದ್ರತಾ ಸಿಬ್ಬಂದಿಯ ತಲೆಗೂ ಹೊಕ್ಕಿದ್ದುದುರಂತ. ಮಹಾರಾಷ್ಟ್ರದಲ್ಲಿಖPಈಯೋಧಚೇತನ್ ಸಿಂಗ್ ರೈಲಿನಲ್ಲಿಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿತನ್ನಉನ್ನತಅಧಿಕಾರಿಯನ್ನುಗುಂಡಿಕ್ಕಿಕೊಂದು ನಂತರ, ಭೋಗಿಯಿಂದ ಭೋಗಿಗೆ ಹೋಗಿ ಮುಸ್ಲಿಂ ಪ್ರಯಾಣಿಕರನ್ನು ಹುಡುಕಿ 3 ಜನಅಮಾಯಕ ಮುಸ್ಲಿಂ ಪ್ರಯಾಣಿಕರನ್ನುಕೊಂದಿದ್ದಾನೆ. ಇದುದೇಶದಲ್ಲಿ ಸಂಘಪರಿವಾರದಜೊತೆ ಸೇರಿಕೊಂಡು ಗೋದಿ ಮಾಧ್ಯಮ ಹಬ್ಬಿರುವದ್ವೇಷದ ಪರಿಣಾಮಎಂಬುದು ಹತ್ಯಾಕಾಂಡದ ನಂತರಯೋಧ ಮಾತನಾಡಿರುವ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಈ ಎಲ್ಲ ಘಟನೆಗಳನ್ನು ಎಸ್.ಡಿ.ಪಿ.ಐ ಪಕ್ಷತೀವ್ರವಾಗಿಖಂಡಿಸುತ್ತದೆ ಮತ್ತುಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದುಆಗ್ರಹಿಸುತ್ತದೆಎಂದುಜಿಲ್ಲಾಧ್ಯಕ್ಷಅಥಾವುಲ್ಲಾದ್ರಾಕ್ಷೀರವರು ಆಗ್ರಹಿಸಿದರು.ಈ ಸಂದರ್ಭದಲ್ಲಿಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿಸಾರ್‍ಅಹ್ಮದ್ ಮನಿಯಾರ ವಿಜಯಪುರ ನಗರ ಮತಕ್ಷೇತ್ರದಅಧ್ಯಕ್ಷರಾದಉಮ್ಮರ್ ಪಠಾಣ್ ಹಾಗೂ ಜಿಲ್ಲಾ ಮುಖಂಡರು, ಕಾರ್ಯಕರ್ತರು,ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.