ಬಿಜೆಪಿಯ ಸುಳ್ಳು ಭರವಸೆ: ಶಿವಾನಂದ ಪಾಟೀಲ್

ಕೊಲ್ಹಾರ:ಏ.18: ದೇಶದ ಹಿತ ಕಾಪಾಡಲು ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎ.ಪಿ.ಎಂ.ಸಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಬದಲಾವಣೆ ತರುವುದಾಗಿ ಹತ್ತು ವರ್ಷಗಳ ಹಿಂದೆ ಅಧಿಕಾರ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ಅವರು ನೀಡಿರುವ ಯಾವ ಭರವಸೆಗಳೂ ಈಡೇರಿಸಿಲ್ಲ, ಕಪ್ಪು ಹಣ, 2 ಕೋಟಿ ಉದ್ಯೋಗ, ಅಚ್ಛೆ ದಿನ್ ಸೇರಿದಂತೆ ಯಾವುದನ್ನು ಕೂಡ ಬಿಜೆಪಿ ಪೂರ್ಣಗೊಳಿಸದೆ ವಿಫಲವಾಗಿದೆ, ದೇಶದಲ್ಲಿ ವರ್ಗ ತಾರತಮ್ಯ, ಜಾತಿ ತಾರತಮ್ಯ, ಧರ್ಮಗಳ ನಡುವೆ ಭೇದಭಾವ ನೀತಿ ಅನುಸರಿಸುವ ಕಾರ್ಯ ಬಿಜೆಪಿ ಪಕ್ಷ ಮಾಡುತ್ತಿದೆ. ರಾಜಕೀಯ ವಿರೋಧಿಗಳನ್ನ ಸಂವಿಧಾನಾತ್ಮಕ ವಿರೋಧಿಸದೆ ಈಡಿ, ಸಿಬಿಐಗಳನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಕೇಂದ್ರ ಸರ್ಕಾದ ದುರಾಡಳಿತದಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯಂತ ವಾತಾವರಣ ನಿರ್ಮಾಣವಾಗಿದೆ, ವಿರೋಧ ಪಕ್ಷದ ಹಾಲಿ ಮುಖ್ಯಮಂತ್ರಿಗಳನ್ನ ಬಂಧನದಲ್ಲಿಟ್ಟು ಚುನಾವಣೆ ನಡೆಸಿದ ಕರಾಳ ಇತಿಹಾಸ ಕೇಂದ್ರದ ಬಿಜೆಪಿ ಸರ್ಕಾರ ನಿರ್ಮಿಸಿದೆ ಎಂದು ದೇಹಲಿ ಮುಖ್ಯಮಂತ್ರಿ ಜಾಖರ್ಂಡ ಮುಖ್ಯಮಂತ್ರಿ ಬಂಧನದ ಕುರಿತು ಹೇಳಿದರು.
ಜಿಲ್ಲೆಗೆ ರಮೇಶ ಜಿಗಜಿಣಗಿ ಕೊಡುಗೆ ಶೂನ್ಯವಾಗಿದೆ ಇಷ್ಟು ವರ್ಷಗಳಕಾಲ ಸಂಸದರಾಗಿದ್ದರು ಕೂಡ ಜಿಗಜಿಣಗಿ ಅಭಿವೃದ್ಧಿಯ ಕುರಿತು ಚಿಂತನೆ ನಡೆಸದೆ ಕೇವಲ ಕಾಲಹರಣ ಮಾಡಿದ್ದಾರೆ.ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳ ವ್ಯಾಪ್ತಿಗೆ ಗೋಲಗುಮ್ಮಟದಿಂದ ಪ್ರಸಿದ್ಧಿ ಪಡೆದಿರುವ ವಿಜಯಪುರ ನಗರವನ್ನು ಸೇರಿಸಿಕೊಂಡು ಅಭಿವೃದ್ಧಿ ಪಡಿಸಬಹುದಿತ್ತು ಸ್ಮಾರ್ಟ್ ಸಿಟಿ ಎನ್ನುವುದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದರು.1952 ರಲ್ಲಿ ಸಂಸದರಾಗಿದ್ದ ದುಬೆಯವರು ಗೋಲಗುಮ್ಮಟದಿಂದ ವಿಶ್ವವಿಖ್ಯಾತಿ ಪಡೆದಿರುವ ವಿಜಯಪುರ ನಗರಕ್ಕೆ ವಿಮಾನ ನಿಲ್ದಾಣ ಮಂಜೂರಿಗೆ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದರು ಎಂದರು.
ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿತ್ತು, ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ ರೈತರ ಹಿತವನ್ನು ಕಡೆಗಣಿಸಿದೆ, ಸಾವಿರಾರು ಕೋಟಿ ರೂಪಾಯಿ ಚುನಾವಣಾ ಬಾಂಡ ಹಗರಣ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿತೊಡಗಿದೆ ಎಂದರು.
ಸುಶಿಲಕುಮಾರ ಶಿಂಧೆಯವರ ಶ್ರಮದಿಂದ ಕೂಡಗಿ ಎನ್.ಟಿ.ಪಿ.ಸಿ ಮಂಜೂರಾಗಿದ್ದು ಆ ಎನ್.ಟಿ.ಪಿ.ಸಿ ಅನುದಾನದಿಂದ ಬ್ರಾಡಗೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಜಿಲ್ಲೆಗೆ ಬ್ರಾಡಗೇಜ್ ಮಂಜೂರು ಮಾಡಿರುವುದು ನಾನೇ ಕುರಿತು ಜಿಗಜಿಣಗಿ ಹೇಳಿಕೆ ಅಪ್ರಸ್ತುತ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಸುರೇಶ ಹಾರಿವಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಎಸ್.ಬಿ ಪತಂಗಿ, ಉಸ್ಮಾನಪಟೇಲ್ ಖಾನ್, ಆಯ್.ಸಿ ಪಟ್ಟಣಶೆಟ್ಟಿ, ಸಿ.ಎಸ್ ಗಿಡ್ಡಪ್ಪಗೋಳ, ಪ.ಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ವೇದಿಕೆಯ ಮೇಲಿದ್ದರು.


ಜಿಲ್ಲೆಯ ಒಬ್ಬನಂತು ಕೇವಲ ಬೋಗಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾನೆ, ಕೇವಲ ಬೋಗಳುವುದಷ್ಟೇ ಅವನ ಕೆಲಸ ಕಚ್ಚುವುದು ಅವನಿಂದಾಗದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ಆಕ್ರೋಶ ಹೊರಹಾಕಿದರು. ಅವನು ಸಂಸದನಾಗಲು ನಾನು ಕಾರಣ ಅನ್ನುವುದು ಅವನು ಮರೆತಿದ್ದಾನೆ ಅನ್ನಿಸುತ್ತೆ, ನಾನು ತಿಕೋಟ ಶಾಸಕನಿದ್ದ ಸಂದರ್ಭ ಆ ವ್ಯಕ್ತಿ ಸಂಸದನಾಗಲು ಶ್ರಮಿಸಿದ್ದೆನೆ. ಸಮಯ ಬರಲಿ ಅದಕ್ಕಾಗಿ ನಾನು ಕಾಯುತ್ತಿದ್ದೆನೆ ಎಂದು ಯತ್ನಾಳ ವಿರುದ್ದ ಹರಿಹಾಯ್ದರು.
_ಸಚಿವ ಶಿವಾನಂದ ಪಾಟೀಲ


ಕಳೆದ 10 ವರ್ಷಗಳಲ್ಲಿ ಬಿಜೆಪಿ ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಅಚ್ಛೆ ದಿನ್, ಕಪ್ಪು ಹಣ, ಎರಡು ಕೋಟಿ ಸೇರಿದಂತೆ ಯಾವ ಭರವಸೆಗಳು ಕೂಡ ಈಡೇರಿಲ್ಲ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿವೆ ದೇಶದ ಅಭಿವೃದ್ಧಿ ದೇಶದ ಹಿತ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ.
_ರಾಜು ಆಲಗೂರ
ಕಾಂಗ್ರೆಸ್ ಅಭ್ಯರ್ಥಿ