ಬಿಜೆಪಿಯ  ಸಂತೋಷ್ ಹೇಳಿಕೆಶುದ್ದ ಸುಳ್ಳು:  ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.02 : ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್. ಸಂತೋಷ ಅವರು
ಕರ್ನಾಟಕದ 40 ಜನ  ಕಾಂಗ್ರೆಸ್ ಶಾಸಕರು ಬಿಜೆಪಿ  ಸಂಪರ್ಕದಲ್ಲಿದ್ದಾರೆ ಎನ್ನುವದು ಶುದ್ದ ಸುಳ್ಳು ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ.ರಾಜಕೀಯ ಚದುರಂಗದಾಟದಲ್ಲಿ ಈ ರೀತಿಯ ಹೇಳಿಕೆಗಳು ಸಾಮಾನ್ಯ. ಸುಳ್ಳು ಸುದ್ದಿ ಹರಡುವ ಪ್ರಯತ್ನ ಬಿಜೆಪಿ ಮಾಡ್ತಿದೆ.ಸಂತೋಷ್ ಅವರು   ರಾಷ್ಟ್ರೀಯ ನಾಯಕರಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ ಎಂದರು.
ಯಾರೊಬ್ಬರು ಕಾಂಗ್ರೆಸ್ ಬಿಡುವ ಪ್ರಶ್ನೆ ಇಲ್ಲ. ಬೇರೆ ಪಕ್ಷದ ಜೊತೆ ಗುರಿತಿಸಿಕೊಂಡಿಲ್ಲ. ಪಕ್ಷ ಬಿಡೋದು, ಆಂತರಿಕ ಕಚ್ಚಾಟ ಎನ್ನುವುದು ಎಲ್ಲವೂ ಸುಳ್ಳು. ನಾವು ಐದು ವರ್ಷ ಕಾಲ ಅದ್ಭುತವಾಗಿ ಸರ್ಕಾರ ನಡೆಸುತ್ತೇವೆ ಪಂಚ ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸೋದೇ ನಮ್ಮ ಉದ್ದೇಶ ಎಂದರು.
ಕಾಂಗ್ರೆಸ್ ಪಕ್ಷ ಸಿದ್ದಾಂತ ಮೆಚ್ಚಿಕೊಂಡು ಬೇರೆ ಪಕ್ಷದವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಲೋಕಸಭೆ ಚುನಾವಣೆ ಬಳಿಕವೂ ಏನೂ ಆಗಲ್ಲ. ನಾವು 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ ಎಂದರೆ  ಓವರ್ ಕಾನ್ಫಿಡೆನ್ಸ್ ಅನ್ನಬಹುದು  20ಕ್ಷೇತ್ರದಲ್ಲಿ ಗೆದ್ದೇ ಗೆಲ್ತೇವೆಂದರು.
 ಒನ್ ನೇಷನ್ ಒನ್‌ ಎಲೆಕ್ಷನ್ ವಿಚಾರ:
ಭಾರತ ಪ್ರಜಾಪ್ರಭುತ್ವ ದೇಶ, ಇಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ನಡೆಸುವುದು ಕಷ್ಟ.
 ಒಂದೊಂದು  ರಾಜ್ಯದಲ್ಲಿ ಒಂದೊಂದು ಸಮಯದಲ್ಲಿ  ಚುನಾವಣೆ ನಡೆಯುತ್ತವೆ. ಒಂದೊಂದು ಕಡೆ ಒಂದೊಂದು ರಾಜಕೀಯ ನೀತಿಗಳಿವೆ. ಈ ಬಗ್ಗೆ ನಮ್ಮ ವರಿಷ್ಠರು ಚರ್ಚಿಸಿ ತೀರ್ಮಾನ  ಮಾಡ್ತಾರೆಂದರು.

One attachment • Scanned by Gmail