ಬಿಜೆಪಿಯ ವೈಭವೋಪೇತ ಆಡಳಿತ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕಲಬುರಗಿ,ನ.28-ಬಿಜೆಪಿ ಸರ್ಕಾರದ ಮಂತ್ರಿಮಂಡಲ ರಚನೆಯಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಈವರೆಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಿಸಿಲ್ಲ ಇದು ಡಬಲ್ ಇಂಜಿನ್ ಸರ್ಕಾರದ ಆಡಳಿತದ ವೈಖರಿಯಾಗಿದೆ ಎಂದು ಮಾಜಿ ಸಚಿವÀ, ಶಾಸಕÀ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಇಂತಹ ವೈಭವೋಪೇತ ಆಡಳಿತ ನೀಡಲೆಂದೇ ಬಿಜೆಪಿ ಪಕ್ಷ ಅಧಿಕಾರದ ಹಪಾಹಪಿತನಕ್ಕೆ ಬಿದ್ದು ಅಧಿಕಾರಕ್ಕೆ ಬಂದಿದ್ದಾ ಎಂದು ವ್ಯಂಗ್ಯವಾಡಿದ್ದಾರೆ.