ಬಿಜೆಪಿಯ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ

ಸಿಂಧನೂರು.ಜು.೧೨-ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ಪಕ್ಷದ ಮುಖಂಡರ ಸೇಡಿನ ರಾಜಕಾರಣ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷದವತಿಯಿಂದ ನಗರದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಶಾಸಕ ಹಂಪನಗೌಡ ಬಾದರ್ಲಿಯವರ ಮನೆಯಿಂದ ಹೋರಟ ಮೌನ ಪ್ರತಿಭಟನೆ ಮೆರವಣಿಗೆ ನಗರದ ಗಾಂಧಿವೃತ್ತಕ್ಕೆ ಬಂದು ಅಲ್ಲಿ ಮೌನ ಪ್ರತಿಭಟನೆ ಧರಣಿ ನಡೆಸಿ ಕೇಂದ್ರ ಬಿಜೆಪಿಯ ಸರ್ಕಾರದ ವಿರುದ್ಧ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಹಾಗೂ ಅದಾನಿ ಇವರ ಸಂಬಂಧದ ಬಗ್ಗೆ ರಾಹುಲ್ ಗಾಂಧಿಯವರು ಭಾಷಣ ಮಾಡಿದ್ದನ್ನು ಸಹಿಸಿಕೊಳ್ಳದ ಬಿಜೆಪಿಯ ಮುಖಂಡರು ರಾಗಾ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಾ ಅವರನ್ನು ದ್ವೊಸಿ ಎಂದು ಸಾಬೀತು ಪಡಿಸಿ ಅವರ ಸಂಸತ ಸ್ಥಾನದಿಂದ ಅನರ್ಹ ಗೊಳಿಸಲು ಹೊರಟಿದ್ದಾರೆ. ಎಂದು ಬರೆದ ಮನವಿ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಿ ನೀಡುವ ಅನೇಕ ತೊಂದರೆಗಳನ್ನು ಸಹಿಸಿಕೊಂಡು ದೇಶದ ಜನರ ಧ್ವನಿಯಾಗಿ ಕೆಲಸ ಮಾಡುವ ರಾಹುಲ್ ಗಾಂಧಿಯವರ ಜೊತೆ ಇಡೀ ದೇಶದ ಜನತೆ ಹಾಗೂ ಪಕ್ಷದ ಮುಖಂಡರ ಕಾರ್ಯಕರ್ತರು ಬೆಂಬಲಿಸಿ ಇಂದು ಅವರು ಒಂಟಿ ಅಲ್ಲ ಅವರ ಜೊತೆ ನಾವಿದ್ದೇವೆ ಎನ್ನುವ ಉದ್ದೇಶದಿಂದ ಇಂದು ಪಕ್ಷದ ವತಿಯಿಂದ ಮೌನ ಪ್ರತಿ ಭಟನೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ರಾದ ಡಿ.ಕೆ.ಶಿವಕುಮಾರಗೆ ಬರೆದ ಮನವಿ ಪತ್ರದಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪಂಪನಗೌಡ ಬಾದರ್ಲಿ, ಖಾಜಿ ಮಲ್ಲಿಕ್, ಮುನೀರ ಪಾಷಾ, ಜಾಫರ್ ಜಾಗೀರದ್ದಾರ್, ಅಶೋಕ ಉಮಲೂಟಿ, ಸುರೇಶ ಜಾಧವ, ಕವಿತಾ, ಅಮರೇಶ, ಎನ್.ಲಿಂಗಾಧರ,
ಶ್ರೇಣಿಕರಾಜ ಶೇಠ, ಲಿಂಗಪ್ಪ ದಡೇಸೂಗೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.