ಬಿಜೆಪಿಯ ರತ್ನಾ ನಾಮಪತ್ರ ಸ್ವೀಕಾರ

ಬೆಳಗಾವಿ,ಏ.೨೨:ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿದ್ದ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಆನಂದ ಮಾಮನಿ ಪಾರಾಗಿದ್ದು, ಅವರ ನಾಮಪತ್ರವನ್ನು ಸ್ವೀಕೃತ ಮಾಡಲಾಗಿದೆ.
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರತ್ಮಾ ಆನಂದ ಮಾಮನಿ ಅವರ ನಾಮಪತ್ರ ಸಿಂಧು ಆಗಿದ್ದು, ನಾಮಪತ್ರ ಸ್ವೀಕೃತವಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ಮಾ ಆನಂದ ಮಾಮನಿ ಅವರ ನಾಮಪತ್ರವನ್ನು ಅಸಿಂಧು ಮಾಡಬೇಕು ಎಂದು ಸಲ್ಲಿಸಿದ ಆಕ್ಷೇಪಣೆಯ ವಿಚಾರವನ್ನು ಇಂದು ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರ ಕ್ರಮಬದ್ಧವಾಗಿದೆ. ಸ್ವೀಕಾರ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರತ್ನಾ ಅವರು ಏ. ೧೮ ರಂದು ನಾಮಪತ್ರ ಸಲ್ಲಿಸಿದ್ದರು. ಅದು ೨೦೧೮ರ ಮಾದರಿಯಲ್ಲಿದೆ. ಆದರೆ, ಸುಪ್ರೀಂಕೋರ್ಟ್ ೨೦೧೯ರಲ್ಲಿ ಫಾರಂ ಸಂಖ್ಯೆ ೨೬ನ್ನು ಪರಿಷ್ಕರಣೆ ಮಾಡಿದ್ದು, ಇದರಡಿ ಪ್ರಮಾಣಪತ್ರ ಸಲ್ಲಿಸಿಲ್ಲ. ಹಾಗಾಗಿ, ಅವರ ನಾಮಪತ್ರವನ್ನು ಅಸಿಂಧು ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ತಕರಾರು ಸಲ್ಲಿಸಿದ್ದರು.
ಈ ಸಂಬಂಧ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ನೋಟೀಸ್ ಜಾರಿ ಮಾಡಿ ಇಂದು ವಿಚಾರಣೆ ನಡೆಸಿ ನಾಮಪತ್ರ ಸಿಂಧು ಎಂದು ಹೇಳಿದ್ದು, ಎಲ್ಲ ವಿವಾದಕ್ಕೂ ತೆರೆ ಬಿದ್ದಂತಾಗಿದೆ.