ಬಿಜೆಪಿಯ ಮೀಸಲಾತಿ ದಲಿತರಿಗೆ ಬರಿ ಕನಸು ಹನುಮಂತಯ್ಯ

ಸಿಂಧನೂರು,ಮೇ.೮- ಯಾವುದೇ ಸಮಾಜಕ್ಕೆ ಮೀಸಲಾತಿ ಸಿಗಬೇಕಾದರೆ ಅದು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಅದು ಸಂವಿಧಾನದ ೩೪೧ ಕಲಂ ತಿದ್ದುಪಡಿ ಮಾಡಿದಾಗ ಮೀಸಲಾತಿ ಜಾರಿಗೆ ತರಲು ಸಾಧ್ಯ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯ ಸಭಾ ಸದಸ್ಯರಾದ ಎಲ್ ಹನುಮಂತಯ್ಯ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರಿಗೆ ಮೀಸಲಾತಿ ಕೊಡುವುದಾಗಿ ಬಿಜೆಪಿಯ ಪಕ್ಷದ ಮುಖಂಡರು ದಲಿತರ ಮತಗಳನ್ನು ಪಡೆಯಲಾಗುತ್ತಿದ್ದಾರೆ ಹೊರತು ನಿಜವಾಗಿ ಮೀಸಲಾತಿ ಕೊಡುವ ಪ್ರಮಾಣಿಕ ಉದ್ದೇಶ ಇಲ್ಲ ಎಂದರು.
ದೇಶದ ಪ್ರಧಾನಿಯೊಬ್ಬರು ರಾಜ್ಯದ ಚುನಾವಣೆಯಲ್ಲಿ ಗಲ್ಲಿ ಗಲ್ಲಿ ಸುತ್ತು ತ್ತಿದ್ದು ಈ ಥರ ಯಾವ ಪ್ರಧಾನ ಮಂತ್ರಿಗಳು ತಿರುಗಾಡಿಲ್ಲ ಪ್ರಧಾನಿ ಮೋದಿ. ಗೃಹ ಮಂತ್ರಿ.ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಇವರು ಚುನಾವಣೆಯಲ್ಲಿ ರಾಜ್ಯದಲ್ಲಿ ಠಿಕಾಣಿ ಹೂಡಿ ಪಕ್ಷದ ಪರವಾಗಿ ಪ್ರಚಾರ ಮಾಡಿ ಮತ ಹಾಕುವಂತೆ ಜನರಲ್ಲಿ ಮನವಿ ಮಾಡುತ್ತಿದ್ದ್ದು ಆದರೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಎಲ್ಲಿ ಯಾವ ನಾಯಕರು ಮಾತನಾಡುತ್ತಿಲ್ಲ ಯಾಕೆ ಅಂದ್ರೆ ಅದನ್ನು ಜಾರಿ ಮಾಡುವ ಸದುದ್ದೇಶ ಇಲ್ಲ ಎಂದರು.
ಅಕ್ಕಿ ವಿದ್ದುತ ಸೇರಿ ಇತರ ಜನರ ಬೇಡಿಕೆಗಳನ್ನು ಉಚಿತ ವಾಗಿ ಕೊಡುವದಾಗಿ ಕಾಂಗ್ರೆಸ ಪಕ್ಷ ಹೇಳಿಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಮುಖಂಡರು ಉಚಿತ ಕೊಡುಗೆ ದೇಶದ ಅಬಿವೃದ್ಧಿ ಗೆ ಮಾರಕ ಎನ್ನುವ ಅವರೆ ಈಗ ಉಚಿತ ಕೋಡಗೆಗಳನ್ನು ಘೋಷಣೆ ಮಾಡಿದ್ದು ಎಷ್ಷು ಸರಿ ಅಂದ್ರೆ ಇವರ ಡಬ್ಬಲ್ ಗೇಮ ಮಾಡುವ ಬಗ್ಗೆ ಮಾತನಾಡುತ್ತಿದ್ದು ಇವರ ಮಾತಿಗೆ ಜನರು ಮರಳು ಆಗುವುದಿಲ್ಲ ಎಂದರು.
ದಲಿತರಿಗಾಗಿ ಕಾಂಗ್ರೆಸ ಪಕ್ಷ ಮೀಸಲಾತಿ ನೀಡಿ ಸಾಕಷ್ಷು ಅನುದಾನ ನೀಡಿದೆ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವ ಕಾಂಗ್ರೆಸ ಪಕ್ಷಕ್ಕೆ ಬೆಂಬಲ ನೀಡಲು ಮಾದಿಗ ಸಮಾಜ ತೀರ್ಮಾನ ಮಾಡಿದೆ ಸಿಂಧನೂರ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ.ಗೆ ಮತ ನೀಡಿ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ ಪಕ್ಷದ ಮಾದಿಗ ಸಮಾಜ ಮುಖಂಡರಾದ ಹನುಮಂತಪ್ಪ ಮುದ್ದಾಪುರ. ಶೇಖರಪ್ಪ ಗಿಣೀವಾರ. ಸುಭಾಷ ಪ್ರಾಂಕಿನ್.ರಾಮಣ್ಣ. ಮರಿಯಪ್ಪ. ಸೇರಿದಂತೆ ಇರತರರು ಇದ್ದರು.