ಬಿಜೆಪಿಯ ಕಾನೂನು ವಿರೋಧಿ ನೀತಿ ಖಂಡಿಸಿದ ಉಗ್ರಪ್ಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ:  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಪತ್ರಿಕಾ ಗೋಷ್ಠಿ ನಡೆಸಿ. ಬಿಜೆಪಿ ಪ್ರಸಕ್ತ ಚುನಾವಣೆಯಲ್ಲಿ  ಮಾಡುತ್ತಿರುವ ಕಾನೂನು ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು.
ಕಾಂಗ್ರೆಸ್ ಸರ್ಕಾರದ 65 ವರ್ಷಗಳ ಆಡಳಿತ ಅವಧಿಯಲ್ಲಿ ಇದ್ದ ನಮ್ಮ ದೇಶದ ಸಾಲದ ಪ್ರಮಾಣ ಮತ್ತು ಬಿಜೆಪಿ ಸರ್ಕಾರದ ಕಳೆದ ಎಂಟು ವರ್ಷಗಳ ಆಡಳಿತ ಅವಧಿಯಲ್ಲಿ ಆಗಿರುವ ಸಾಲದ ಪ್ರಮಾಣಗಳನ್ನು ಹೋಲಿಸಿ, ಅಧಿಕ ಪ್ರಮಾಣದಲ್ಲಿ ಸಾಲ ಮಾಡಿ, ಅಭಿವೃದ್ಧಿಪರ, ಜನಪರ ಕಾರ್ಯಕ್ರಮಗಳನ್ನು ಮಾಡದೇ, ಸುಳ್ಳು ಭಾಷಣ ಮಾಡಿ ಬಿಜೆಪಿ ಲೀಡರ್ ಗಳು  ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ,  ಇದೇನಾ ರಾಮನ ಆಡಳಿತ..?  ಇದೇನಾ ರಾಮರಾಜ್ಯ …? ಇದೇನಾ ರಾಮರಾಜ್ಯ ನಿರ್ಮಿಸುವ ಪರಿ…? ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದರು.
 ಬಿಜೆಪಿ ಸರ್ಕಾರದ ಈ ಎಲ್ಲಾ ನೀಚ ಕೃತ್ಯಗಳ ಬಗ್ಗೆ ಅರಿತಿರುವ ಜನ, ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ, ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದರು.
 ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ  ಶೈಲಜಾ ಜಾನಾಥ್, ಮಹಾರಾಷ್ಟ್ರದ ಮಾಜಿ ಮಂತ್ರಿ ವಸಂತ್ ರಾವ್ ಪೂರ್ಕೇ, ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್,  ಗುಂಟೂರಿನ ಮಾಜಿ ಶಾಸಕ ಶೈಕ್ ಮಸ್ತಾನ್ ವಲಿ, ತಮಿಳುನಾಡು ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ  ಅಸ್ಲಾಂ ಭಾಷಾ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಜಂಟಿ ಸಂಯೋಜಕ ವೆಂಕಟೇಶ್ ಹೆಗಡೆ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಇದ್ದರು.