ಬಿಜೆಪಿಯ ಆಮಿಷಗಳಿಗೆ ಬಲಿಯಾಗಬೇಡಿ: ಶಾಸಕ

ಹಗರಿಬೊಮ್ಮನಹಳ್ಳಿ .ಜ.೦೭ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಕಡಿಮೆ ಇರುವದರಿಂದ ಅಮ್ಮ ಬೆಂಬಲಿತ ಸದಸ್ಯರನ್ನು ಆಮಿಷ ಕೊಡುತ್ತಿದ್ದಾರೆ ಇದಕ್ಕೆ ತಾವುಗಳು ಬಲಿಯಾಗಬೇಡಿ ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು .
ಪಟ್ಟಣದ ಕನ್ನಿಕಾಪರಮೆಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾನಾ ಪಂಚಾಯತಿಗಳ ನೂತನ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ 472 ಪಂಚಾಯತಿ ಸ್ಥಾನಗಳಲ್ಲಿ 247 ಸ್ಥಾನಗಳಿಗೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯ ಹಿನ್ನಲೆಯಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಶ್ರಮವಿದೆ ಎಂದು ಶ್ಲಾಘಿಸಿದರು.
ತಾಲ್ಲೂಕಿನ ಗ್ರಾಮೀಣ ಮತದಾರರು ಪ್ರಬುದ್ಧರಾಗಿ ಮತ ಚಲಾಯಿಸಿದ್ದು, 16 ಪಂಚಾಯತಿಗಳ ಆಡಳಿತ ಕಾಂಗ್ರೆಸ್ ಪಕ್ಷದ ಪಾಲಾಗಿದೆ .
ಪಂಚಾಯತಿ ಸದಸ್ಯರ ಆಯ್ಕೆ ಕುರಿತಂತೆ ಬಿಜೆಪಿಯ ಮಾಜಿ ಶಾಸಕರು ಅನಗತ್ಯ ಸುಳ್ಳುಗಳನ್ನು ತೇಲಿ ಬಿಡುತ್ತಿದ್ದಾರೆ ಎಂದರು.
ಕಾಂ ಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿ, ಯಡಿಯೂರಪ್ಪನವರ ಸರಕಾರ ಕೊರೊನಾ ನೆವದಲ್ಲಿ ಚುನಾವಣೆ ನಡೆಸದೆ ನಾಮ ನಿರ್ದೇಶನದ ಮೂಲಕ ಪಂಚಾಯತಿಗಳ ಆಡಳಿತ ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಅಸ್ಥಿರಗೊಳಿಸುವ ಸಂಚು ನಡೆಸಿತ್ತು ಎಂದು ಆರೋಪಿಸಿದರು.
ಸಮಾರಂಭದಲ್ಲಿ ನೂತನ ಪಂಚಾಯತಿ ಸದಸ್ಯರನ್ನು ಗೌರವಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್,ಜಿಪಂ ಮಾಜಿ ಮಾಜಿ ಸದಸರಾದ ರಾಮಣ್ಣ ,ಅಕ್ಕಿ ತೋಟೇಶ್ ,,ಜಿ.ಪಂ. ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಕುರಿ ಶಿವಮೂರ್ತಿ, ಹೆಗ್ಡಾಳಡ ರಾಮಣ್ಣ, ಕನ್ನಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಲಿಂಗಪ್ಪ,
ಹಾಲ್ದಾಳ್ ವಿಜಯಕುಮಾರ್, ಪವಾಡಿ ಹನಮಂತಪ್ಪ, ಪುರಸಭೆ ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಸದಸ್ಯ ಅಲ್ಲಭಕ್ಷಿ ಹಾಗೂ ಇತರರಿದ್ದರು. ಶಾರದಾ ಮಂಜುನಾಥ, ಡಿಶ್ ಮಂಜುನಾಥ ಮತ್ತು ಗುರುಬಸವರಾಜ್ ಸೊನ್ನದ ನಿರ್ವಹಿಸಿದರು.

Spread the love