
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.28: ನಗರ 16 ನೇ ವಾರ್ಡಿನ ಇಂದಿರಾನಗರದ ನೇಕಾರ ಬೀದಿ. ಸವಿತಾ ಸಮಾಜ ಬೀದಿ. ಹಾಗೂ ವಡ್ಡರ ಬೀದಿಯಲ್ಲಿ ಇಂದಸುಮಾರು ಮನೆ ಮನೆಗೆ ತೆರಳಿ ನಗರದ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಟಿ. ವಿ. ಪ್ರಸಾದ್, ಸುಬ್ಬರಾಯುದು, ಪಿ. ಜಿ. ವೆಂಕಟಯ್ಯ, ರಾಂಪ್ರಸಾದ್, ಪರಶುರಾಮ್, ವಿವೇಕ್, ರಾಜು, ರಾಮು, ನರಸಮ್ಮ ಮೊದಲಾದವರು ಇದ್ದರು.
ಇನ್ನು ನಿನ್ನೆ ಸಂಜೆ 13ನೇ ವಾರ್ಡ್, ಮಿಲ್ಲರ್ ಪೇಟೆಯಲ್ಲಿ, ಮನೆ ಮನೆಗು ತೆರಳಿ ಪ್ರಚಾರ ಮಾಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು ನಗರದ ಬಹುತೇಕ ಗಲ್ಲಿಗಳಲ್ಲಿ ಸಿಸಿ ರಸ್ತೆ, ಕುಡಿಯುವ ನೀರು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಶಾಲೆಗಳು ಹಾಗೂ ಉನ್ನತ ಶಿಕ್ಷಣ, ಹಾಗೂ ನಗರದ ಬಹುತೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದು,
ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ತಮ್ಮ ಮತವನ್ನು ನನಗೆ ಮತ್ತೊಮ್ಮೆ ನೀಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ತಾವು ಸಹ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು , ಮೋತ್ಕರ್ ಶ್ರೀನಿವಾಸ್ , ಪ್ರಮುಖ ಮುಖಂಡರಾದ ವೀರಶೇಖರೆಡ್ಡಿ ಮೊದಲಾದವರು ಇದ್ದರು.
ಸೇರ್ಪಡೆ
ನಗರ ಬಿಜೆಪಿ ಕಚೇರಿಯಲ್ಲಿ ಇಂದು ಪಾಲಿಕೆಯ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷೀದೇವಿ, ಶ್ರೀನಿವಾಸುಸುಲು ಡಿಶ್. ಹಾಗೂ ದೇವಿನಗರ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರೂ. ಮುಖಂಡರಾದ ವೀರಶೇಕರ ರೆಡ್ಡಿ, ಸುಧೀರ್, ಬಸವ, ಓಬಳೇಶ್, ರಾಜೇಶ್ ರೆಡ್ಡಿ, ಮುಂತಾದವರು ಭಾಗವಹಿಸಿದ್ದರು.