
ಕೋಲಾರ,ಮೇ,೨೩- ಕರ್ನಾಟಕದ ಮುಖ್ಯಮಂತ್ರಿಗಳ ಆಯ್ಕೆ ಕುರಿತಂತೆ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಸೇನಾನಿಯ ಆಯ್ಕೆ ಬಗ್ಗೆ ಕಾಂಗ್ರೆಸ್ ಪಕ್ಷವು ಸಾಧಕ ಭಾಧಕಗಳನ್ನು ಚಿಂತಿಸಿ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಹೊರತು ಪಡೆಸಿ ಬೇರೆ ಯಾರನ್ನೆ ಆಯ್ಕೆ ಮಾಡಿದರೂ ಸರಿ ಹೊಂದದು ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಇತರೆ ಬಿಜೆಪಿಯೇತರ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಸಾರಿಸಾಠಿಯನ್ನು ಆಯ್ಕೆಯ ಬಗ್ಗೆ ಒತ್ತಡ ಹೇರಿದ್ದರು.
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಖ್ಯ ಮಂತ್ರಿ ಆಯ್ಕೆಯ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್, ತಮಿಳು ನಾಡಿನ ಮುಖ್ಯ ಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಮಹಾರಾಷ್ಟ್ರದ ಎನ್.ಸಿ.ಪಿ. ನಾಯಕ ಶರದ್ ಪವರ್ ಅವರುಗಳು ಸೋನಿಯ ಗಾಂಧಿಯವರಿಗೆ ತಮ್ಮ ಸಂದೇಶದಲ್ಲಿ ನೀವು ಕರ್ನಾಟಕದ ಮುಖ್ಯ ಮಂತ್ರಿಯನ್ನು ಮಾತ್ರ ಆಯ್ಕೆ ಮಾಡುತ್ತಿಲ್ಲ ತೃತೀಯ ರಂಗದ ಸೇನಾನಿಯನ್ನು ಎಂಬುವುದು ಅರಿತು ಸಿದ್ದರಾಮಯ್ಯ ಅವರನ್ನು ಹೊರತು ಪಡೆಸಿ ಬೇರೊಬ್ಬರೂ ಆಯ್ಕೆಯಾಗದಿರಲಿ ಎಂಬ ಸಲಹೆಯನ್ನು ಸೋನಿಯಗಾಂಧಿಗೆ ರವಾನಿಸಿದ್ದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಆನೆ ಬಲ ದೊರೆತದಂತಾಯಿತು,
ಮೊನ್ನೆ,ಮೊನ್ನೆಯವರೆಗೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತ ಬ್ಯಾನಾರ್ಜಿ ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ಇರಲಿಲ್ಲ ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರತು ಪಡೆಸಿದ ತೃತೀಯ ರಂಗ ಅಸ್ಥಿತ್ವಕ್ಕೆ ಬರಬೇಕೆಂದು ಪ್ರತಿಪಾದಿಸುತ್ತಲೇ ಇದ್ದರು. ಅದರೆ ಅವರಿಗೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಹೊರತು ಪಡೆಸಿದರೆ ದೇಶದಲ್ಲಿ ಬಿಜೆಪಿಯೇತರ ಶಕ್ತಿಗಳು ತಲೆ ಎತ್ತಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವಾಗಿದ್ದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನೆ ಮುಖ್ಯ ಮಂತ್ರಿ ಅವರನ್ನೆ ಆಯ್ಕೆ ಮಾಡಬೇಕೆಂಬ ಶಿಫಾರಸ್ಸಿನ ಸಂದೇಶವನ್ನು ಕಾಂಗ್ರೆಸ್ ನಾಯಕರಿಂದ ಸೋನಿಯ ಗಾಂಧಿಯವರಿಗೆ ರವಾನಿಸಿದ್ದಾರೆ.
ಸಿದ್ದರಾಮಯ್ಯ ಅವರ ಬದಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಿದರೆ ಬಿಜೆಪಿಯೇತರ ಶಕ್ತಿಗಳಿಗೆ ಒಬ್ಬ ಪ್ರಬಲ ಸೇನಾನಿ ದಕ್ಕದಂತಾಗುತ್ತದೆ ಅಲ್ಲದೆ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಇರುವ ಅರೋಪಗಳನ್ನು ಕುಣಿಕೆಯಾಗಿ ಪರಿವರ್ತಿಸಿ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತ ಸಾಧ್ಯತೆ ಇದ್ದು ಇದರಿಂದ ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯನ್ನು ಹೆಚ್ಚಿಸ ಬಹುದಾದ ಸಾಧ್ಯತೆ ಇದೆ ಎಂಬ ಬಗ್ಗೆ ಅರಿವುಂಟು ಮಾಡಲಾಗಿದೆ.
ಹಾಗಾಗಿಯೇ ಡಿಕೆಶಿ ಮುಖ್ಯ ಮಂತ್ರಿಯಾಗ ಬೇಕೆಂಬ ಕೊಗುಗಳಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಿವಿಗೊಡಲಿಲ್ಲ ಏಕೆಂದರೆ ಅವರಿಗೆ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗುವುದು ಕಾಲದ ಅನಿವಾರ್ಯತೆ ಇದೆ ಅಂತ ಗೊತ್ತಿತ್ತು ಹಾಗಾಗಿ ಡಿ.ಕೆ.ಶಿ. ಅವರ ಮನವೊಲಿಸಿ ಸತ್ಯಾಂಶದ ಜ್ಞಾನೋದಯ ಮೋಡಿಸಿದ ನಂತರ ಡಿ.ಕೆ.ಸಿ. ಸಮ್ಮತಿಸಿ ಲೋಕಸಭಾ ಚುನಾವಣೆಯ ನಂತರ ಕೊನೆಯ ಎರಡೂವರೆ ವರ್ಷ ತನಗೆ ಮುಖ್ಯ ಮಂತ್ರಿ ಸ್ಥಾನ ಬಿಟ್ಟು ಕೊಡಬೇಕೆಂದಾಗ ಬೀಸುವ ದೊಣ್ಣೆ ತಪ್ಪಿದರೆ ಸಾಕೆಂದು ಡಿಕೆಶಿ ಎಲ್ಲಾ ಕರಾರುಗಳಿಗೆ ಸಮ್ಮತಿ ನೀಡಲಾಗಿದೆ.