ಬಿಜೆಪಿಯಿಂದ ಹಿಂಬಾಗಿಲು ರಾಜಕೀಯ:ಶಾಸಕ ಭೀಮನಾಯ್ಕ

ಹಗರಿಬೊಮ್ಮನಹಳ್ಳಿ:ನ.08 ಕ್ಷೇತ್ರದ ಎರಡು ಪಟ್ಟಣ ಪಂಚಾಯ್ತಿ ಒಂದು ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಿರಸ್ಕರಿಸಿದ್ದಾರೆ.ಆದರೆ ಬಿಜೆಪಿ ಅಧಿಕಾರಕ್ಕೆ ವಾಮ ಮಾರ್ಗ ಕಂಡುಕೊಂಡು ಹಿಂಬಾಗಿಲು ಮೂಲಕ ಪ್ರವೇಶ ಮಾಡುವುದೇ ಅವರ ಕಾಯಕವಾಗಿದೆ ಎಂದು ಶಾಸಕ ಭೀಮನಾಯ್ಕ ಹೇಳಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಹಣಬಲ,ತೋಳಬಲ ಮತ್ತು ಗೂಂಡಾ ಸಂಸ್ಕೃತಿಯಿಂದ ಅಧಿಕಾರ ಹಿಡಿಯಲು ಪ್ರಯತ್ನಿಸಿದರೆ ನಾವೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ.ನಮಗೂ ರಾಜಕೀಯಾ ಮಾಡವುದು ಗೊತ್ತು.ನಮ್ಮ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬೇರೆ ಪಕ್ಷಕ್ಕೆ ಮತ ಹಾಕವರನ್ನು ಸೆಳೆದರೆ ನಾವು ಬಿಜೆಪಿ ಸದಸ್ಯರನ್ನು ಸೆಳೆಯವುದು ಗೊತ್ತು ಮುಯ್ಯಿಗೆ ಮುಯ್ಯಿ ಮಾಡೆದರೆ ತಪ್ಪೇನು?ಕಾಂಗ್ರೆಸ್ ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ಕಾರ್ಯಕರ್ತರು ಸತ್ತಿಲ್ಲ, ನಾವು ತಾಯಿಯ ಹಾಲು ಕುಡಿದಿದ್ದೇವೆ,ಉಪ್ಪುಕಾರ ತಿಂದಿದ್ದೇವೆ ನಮ್ಮಗೂ ರೋಸ ಇರಲ್ವಾ?ಚುನಾವಣೆ ನಡೆಯುವ ಸಂದರ್ಭದಲ್ಲಿ ಆಂದ್ರದಿಂದ ಗೂಂಡಾಗಳನ್ನು ಗಲಾಟಿ ಮಾಡಿಸಿ ಶಾಂತಿ ಕದಡುವ ಕೆಲಸ ಬಿಜೆಪಿ ಮಾಡುತ್ತಿದೆ.ಸೋಲಿನ ಹತಾಶೆಯಿಂದ ಚುನಾವಣೆ ನಡೆಯುವುದನ್ನು ನಡೆಯಲು ಪ್ರಯತ್ನಿಸಿದರೆ ಸಂವಿಧಾನ ವಿರೋಧಿಸಿದಂತೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು.ಪೊಲೀಸರು ತಾಲೂಕಿನಲ್ಲಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ.ಬಿಜೆಪಿ ಸರ್ಕಾರ ಇದೆ ಎಂಬ ಮಾತ್ರಕ್ಕೆ ಅವರು ಹೇಳಿದಂತೆ ಕೇಳಿದರೆ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾದರೆ ನಾನು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ.ಚುನಾವಣೆಯಲ್ಲಿ ಗೆದ್ದ ಅದ್ಯಕ್ಷೆ ಮತ್ತು ಉಪಾಧ್ಯಕ್ಷ ಗೆಲವು ನನ್ನ ಗೆಲವು ಅಲ್ಲ ಇದು ಕಾರ್ಯಕರ್ತರ ಮತ್ತು 23 ವಾರ್ಡಗಳ ಮತದಾರರ ಗೆಲವು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಲಿಂಗಪ್ಪ, ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಕಾಂಗ್ರೆಸ್ ಮುಖಂಡ ಪವಾಡಿ ಹನುಮಂತಪ್ಪ, ಪುರಸಭೆಯ ನೂತನ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ಯು.ಬಾಬುವಲಿ, ಸದಸ್ಯರಾದ ಹಂಚಿನಮನೆ ಹನುಮಂತಪ್ಪ, ಅಲ್ಲಾಪಕ್ಷಿ ರೆಹಾಮಾನ್, ಕಾಂಗ್ರೆಸ್ ಮುಖಂಡರಾದ ಕನ್ನಿಹಳ್ಳಿ ಚಮದ್ರು ಹುಡೇದ್ ಗುರುಬಸವರಾಜ್ ಚಿಂತ್ರಪಳ್ಳಿ ದೇವೇಂದ್ರ, ಡಿಶ್ ಮಂಜನಾಥ, ಜಂದಿಸಾಬ್, ಹಾಲ್ದಾಳ್ ವಿಜಯಕುಮಾರ್, ಸೊನ್ನದ್ ಗುರುಬಸರಾಜ್ ಇತರರಿದ್ದರು.