ಬಿಜೆಪಿಯಿಂದ ಸಾರ್ವಜನಿಕ ಸಂಪರ್ಕ ಅಭಿಯಾನ: ಗಣ್ಯರ ಭೇಟಿ

ಬೀದರ,ಜು 8: ಬಿಜೆಪಿಪಕ್ಷದ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ
ಸಾರ್ವಜನಿಕ ಸಂಪರ್ಕ ಅಭಿಯಾನದ ಅಂಗವಾಗಿ ಬೀದರನಗರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂಜಿಲ್ಲಾಧ್ಯಕ್ಷÀ ಶಿವಾನಂದ ಮಂಠಾಳಕರರವರ ನೇತೃತ್ವದಲ್ಲಿಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡು,ನಗರದಲ್ಲಿರುವ ಮಠಾಧೀಶರಿಗೆ, ವಿವಿಧ ವ್ಯಾಪಾರೋದ್ಯಮಿಗಳಿಗೆ,ಕೈಗಾರಿಕೊದ್ಯಮಿಗಳಿಗೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ
ಹಾಗೂ ಸಾಹಿತಿಗಳಿಗೆ ಭೇಟಿ ಮಾಡಿ, ಕಳೆದ 9 ವರ್ಷಗಳಲ್ಲಿ
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ದೇಶದಲ್ಲಿ ಕೈಗೊಳ್ಳಲಾದ ಅಭಿವೃದ್ದಿ ಹಾಗೂ ಬೀದರ ಲೋಕಸಭಾ
ಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪುಸ್ತಕ ಹಂಚಿಕೆಯೊಂದಿಗೆ, ಮಾಹಿತಿ ನೀಡಿ, ಚರ್ಚಿಸಿದರು.
ಸಚಿವರು ಹಾಗೂ ಪಕ್ಷದ ಮುಖಂಡರು ಸೇರಿ ನಗರದಸಿದ್ಧಾರೂಢ ಮಠದ ಪೂಜ್ಯರಾದ ಡಾ. ಶಿವಕುಮಾರಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ, ದರುಶನ ಪಡೆದುಕೊಂಡು,ಸರ್ಕಾರದ ಸಾಧನೆಗಳ ಪುಸ್ತಕವನ್ನು ನೀಡಿ, ದೇಶ ಹಾಗೂ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿಸ್ಕøತವಾಗಿ ತಿಳಿಸಿ
ಚರ್ಚಿಸಿದರು.ನಂತರ ಚೆಂಬರ್ ಆಫ್ ಕಾಮರ್ಸ ಅಧ್ಯಕ್ಷಬಿ.ಜಿ.ಶೇಟಕಾರ್, ಬಂಗಾರ ಅಭರಣಗಳ ವ್ಯಾಪಾರೋದ್ಯಮಿಗಳಸಂಘದ ಅಧ್ಯಕ್ಷ ನಂದಕಿಶೋರ ವರ್ಮಾರವರಿಗೆ ಹಾಗೂ ವ್ಯಾಪಾರೋದ್ಯಮಿಗಳಿಗೆ, ಕರ್ನಾಟಕ ಸಾಹಿತ್ಯ ಪರಿಷತ್ ಗೆ ತೆರಳಿ, ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ಸಾಹಿತಿಗಳ ಭೇಟಿ ಮಾಡಿದರು.ನಂತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಲಬೀರ್ ಸಿಂಗ್, ಔಷಧ ವ್ಯಾಪರೋದ್ಯಮಿಗಳ ಸಂಘಕ್ಕೆ ತೆರಳಿ,ಅಧ್ಯಕ್ಷ ಶಿವರಾಜ ಪಾಟೀಲ್‍ರವರ ಹಾಗೂ ಔಷಧ ವ್ಯಾಪಾರಿಗಳಿಗೆ ಭೇಟಿ ಮಾಡಿ ಸಾಧನೆಗಳ ಕುರಿತು ತಿಳಿಸಿದರು.
9 ವರ್ಷಗಳಲ್ಲಿ ಭಾರತವು ವಿಶ್ವಗುರುವಾಗಿದೆ, ಭಾರತದ ಸಲಹೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ, ಮುಂದಿನ ಭಾರತದ ಭವಿಷ್ಯಕ್ಕಾಗಿ ಮೋದಿಯವರ ನೇತೃತ್ವ ದೇಶಕ್ಕೆ ಅತ್ಯಗತ್ಯವಾಗಿರುವ ಬಗ್ಗೆ
ತಿಳಿಸಿ, ಸಹಕಾರ ನೀಡುವಂತೆ ಎಲ್ಲರಲ್ಲಿ ಕೋರಿದರು.ನಮ್ಮ ಸರ್ಕಾರ ಎಲ್ಲರ ಹಿತ ಕಾಯುವ ಸರ್ಕಾರವಾಗಿದೆ. ನಾವು ಮಾಡಿರುವ ಕೆಲಸಗಳ ವರದಿಯನ್ನು ತಮ್ಮ ಮುಂದೆಇಡುತ್ತಿದ್ದೇವೆ, ನಮ್ಮ ಸಾಧನೆಗಳು ತಿಳಿದುಕೊಂಡು ಎಲ್ಲರೂತಮ್ಮ ಸುತ್ತಮುತ್ತಲಿನ ಜನರೊಂದಿಗೆ ಮುಕ್ತವಾಗಿಹಂಚಿಕೊಳ್ಳಬೇಕು, ನಮಗೆ ಪ್ರೋತ್ಸಾಹಿಸಬೇಕೆಂದು ನಗರದಪ್ರಮುಖರಲ್ಲಿ ಹಾಗೂ ಜನತೆಯಲ್ಲಿ ಕೋರಿದರು.ನಂತರ ಮಾಜಿ ಶಾಸಕ ರಮೇಶಕುಮಾರಪಾಂಡೆಯವರ ಮನೆಗೆ ತೆರಳಿ, ಆರೋಗ್ಯ ವಿಚಾರಿಸಿದರು. ಈಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್,ಮುಖಂಡರಾದ ಶಶಿಧರ ಹೊಸಳ್ಳಿ, ಬಾಬುವಾಲಿ, ರಾಜಶೇಖರ ನಾಗಮೂರ್ತಿ, ಶ್ರಿಕಾಂತ ಮೋದಿ, ರಾಜಕುಮಾರ ಮಣಗೀರೆ, ಸುಭಾಷ ಮಡಿವಾಳ, ಪ್ರಶಾಂತ ವಡಗಿರೆ, ಹಣಮಂತ ಬುಳ್ಳಾ, ಅಣೆಪ್ಪ
ಖಾನಾಪೂರೆ ಇತರರು ಉಪಸ್ಥಿತರಿದ್ದರು.