
ಕಲಬುರಗಿ,ಮಾ 24: ಮಹಾ ನಗರ ಪಾಲಿಕೆಯ ಮಹಾಪೌರ ಮತ್ತು ಉಪ ಮಹಾಪೌರರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ವಿಶಾಲ ಧರ್ಗಿಮತ್ತು ಶಿವಾನಂದ ಪಿಸ್ತಿ ರವರನ್ನು ಆಯ್ಕೆ ಮಾಡುವ ಮೂಲಕ ದಲಿತರ ಮತ್ತು ಸರ್ವ ಜನಾಂಗಕ್ಕೆ ನ್ಯಾಯ ನೀಡುವ ಮೂಲಕ ಭಾರತೀಯ ಜನತಾ ಪಕ್ಷ ಸಾಮಾಜಿಕ ನ್ಯಾಯ ನೀಡಿದೆ ಎಂದು ಬಿಜೆಪಿ ಕಲಬುರಗಿ ದಕ್ಷಿಣ ಮಂಡಳದ ವಕ್ತಾರ ಮಂಜುನಾಥ ನಾಲವಾರಕರ್ ಹೇಳಿದ್ದಾರೆ.
ದಿ,ಚಂದ್ರಶೇಖರ ಪಾಟೀಲ ರೇವೂರ ಅವರು ದಲಿತ ಮಹಿಳೆಗೆ ಮಹಾಪೌರರಾಗಿ ಆಯ್ಕೆ ಮಾಡಿದ ಮೇಲೆ ಸುಮಾರು 12ವರ್ಷಗಳ ನಂತರ ಅವರ ಸುಪುತ್ರ ಮತ್ತು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ದಲಿತರ ಜೊತೆ ಬಿಜೆಪಿ ಇದೆ ಎಂದು ತೋರಿಸುವ ಮೂಲಕ ವಿಶಾಲ ಧರ್ಗಿ ಅವರಿಗೆ ಕಲಬುರಗಿ ಮಹಾ ನಗರ ಪಾಲಿಕೆ ಮಹಾಪೌರರಾಗಿ ಆಯ್ಕೆ ಮಾಡಿ ಮತ್ತೊಂದು ಬಾರಿ ಕಲಬುರಗಿ ನಗರದ ಅಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.