ಬಿಜೆಪಿಯಿಂದ ರಾಜ ಧರ್ಮ ಉಲ್ಲಂಘನೆ : ಪಳನಿ ಆರೋಪ

ಚೆನ್ನೈ,ಮಾ.೯- ತಮಿಳುನಾಡಿನಲ್ಲಿ ಮಿತ್ರ ಪಕ್ಷ ಬಿಜೆಪಿ ರಾಜ ಧರ್ಮವನ್ನು ಉಲ್ಲಂಘಿಸಿದೆ ಎಂದು ಎಐಎಡಿಎಂಕೆ ಪಕ್ಷದ ನಾಯಕ ಎಡಪ್ಪಾಡಿ ಪಳನಿ ಸ್ವಾಮಿ ಆರೋಪಿಸಿದ್ದಾರೆ.
ಪಳನಿ ಸ್ವಾಮಿ ಆರೋಪದಿಂದಾಗಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ತಮಿನಾಡಿನಲ್ಲಿ ಅಂತ್ಯಕ್ಕೆ ಬಂದಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
೨೦೧೯ರ ಲೋಕಸಭಾ ಚುನಾವಣೆ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಮೂರು ವಿವಿಧ ಚುನಾವಣೆಗಳಲ್ಲಿ ಸೋಲು ಕಂಡಿದೆ. ಈ ಎಲ್ಲಾ ಬೆಳವಣಿಗೆಯ ನಡುವೆಯೇ ಎಡಪ್ಪಾಡಿ ಪಳನಿ ಸ್ವಾಮಿ ಅವರು ಬಿಜೆಪಿ ರಾಜ ಧರ್ಮವನ್ನು ಉಲ್ಲಂಘಿಸಿದೆ ಎನ್ನುವ ಆರೋಪ ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಮೈತ್ರಿ ಅಂತ್ಯ ಸೂಚನೆ;
ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧ ಸಾರ್ವಕಾಲಿಕವಾಗಿ ಕುಸಿದಿದೆ. ಟುಟಿಕೋರಿನ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ಅವರ ಭಾವಚಿತ್ರ ಸುಟ್ಟುಹಾಕಿದ್ದಾರೆ, ಇದರಿಂದ ಪಳನಿಸ್ವಾಮಿ ಕೆಂಡಮಂಡಲರಾಗಿ ಬಿಜೆಪಿ “ಸಮ್ಮಿಶ್ರ ಧರ್ಮ” ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ವಾರ ಐವರು ಬಿಜೆಪಿ ನಾಯಕರ ರಾಜ್ಯ ಐಟಿ ವಿಭಾಗದ ಮುಖ್ಯಸ್ಥ ಸಿಆರ್‌ಟಿ ನಿರ್ಮಲ್‌ಕುಮಾರ್, ಸೇರಿದಂತೆ ೧೩ ಮಂದಿ ಬಿಜೆಪಿ ಸದಸ್ಯರು ಸಿಟಿಆರ್ ನಿರ್ಮಲ್ ಕುಮಾರ್ ಅವರನ್ನು ಬೆಂಬಲಿಸಿ ಪಕ್ಷ ತೊರೆದು ಎಐಎಡಿಎಂಕೆ ಸೇರಿದ್ದರು. ಇದು ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈಮನಸ್ಯಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾದ್ಯಕ್ಷ ಅಣ್ಣಾಮಲೈ ಅವರು ಡಿಎಂಕೆ ಸಚಿವರೊಬ್ಬರೊಂದಿಗೆ ರಹಸ್ಯ ತಿಳುವಳಿಕೆ ಹೊಂದಿದ್ದಾರೆ ಎಂದು ಆರೋಪಿಸಿ ಕುಮಾರ್ ಅವರು ಪಕ್ಷ ತೊರೆದು ಎಐಎಡಿಎಂಕೆ ಸೇರಿದ್ದರು.
೨೦೧೯ ರ ಲೋಕಸಭಾ ಚುನಾವಣೆಯಿಂದ, ಎಐಎಡಿಎಂಕೆ ಮೂರು ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಸೋತಿದೆ. ಎಐಎಡಿಎಂಕೆ ಮೈತ್ರಿಕೂಟ ಸೋತಿರುವ ಇತ್ತೀಚಿನ ಉಪಚುನಾವಣೆಯಲ್ಲಿ ಪಕ್ಷಗಳು ಒಟ್ಟಾಗಿ ಪ್ರಚಾರ ನಡೆಸಲಿಲ್ಲ. ಪಕ್ಷ ಬಿಜೆಪಿಯನ್ನು ಈಗ ಹೊಣೆಗಾರಿಕೆ ಮಾಡಿದೆ.