ಬಿಜೆಪಿಯಿಂದ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ

ಕಾಳಗಿ.ಸೆ.18: ನಿಜಾಮನ ಕಪಿಮುಷ್ಠಿಯಿಂದ ಕಂಗಾಲಾಗಿರುವ ಕಲ್ಯಾಣ ಕರ್ನಾಟಕ ಭಾಗವು, ಸರ್ದಾರ್ ವಲ್ಲಭಭಾಯಿ ಪಟೇಲರ ಸೈನಿಕ ಕಾರ್ಯಾಚರಣೆಯ ಫಲದಿಂದ ಕಲ್ಯಾಣ ಕರ್ನಾಟಕ ಭಾಗವು ಸಂಪೂರ್ಣ ಸ್ವತಂತ್ರ್ಯಗೊಂಡು 75ವರ್ಷಗಳ ಕಾಲ ಗತಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಾಧ್ಯಂತ ಸಡಗರ ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.

ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ ಅವರು, ಸರ್ದಾಜೀ…ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣವನ್ನು ಮಾಡಿದರು.

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಚಿಂಚೋಳಿ ಮಂಡಲದ ಕಾಳಗಿ ತಾಲೂಕು ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ವಸತಿನಿಲಯಗಳಲ್ಲಿ ವಾಸವಿದ್ದು ಅಬ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ನೋಟ್ ಪುಸ್ತಕ, ಲೆಕ್ಕಣಿಕೆ ಮತ್ತು ಸಿಹಿದಿನಸು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಿದರು.

  ಕಲಬುರಗಿ ಜಿಲ್ಲಾ ಬಿಜೆಪಿ ಹಿಂದೂಳಿದ ವರ್ಗಗಳ ಮೋರ್ಚಾದ ಕೋಶಾಧ್ಯಕ್ಷ ರಾಜಕುಮಾರ ರಾಜಾಪೂರ ಕಾಳಗಿ, ಗ್ರಾಪಂ. ಮಾಜಿ ಸದಸ್ಯ ಮಂಜುನಾಥ ಹೆಬ್ಬಾಳ, ಶಿವರಾಯ ಕೋಯಿ, ರತ್ನಮ್ಮ ಡೊಣ್ಣೂರ, ಕಾಳು ಪಡಶೆಟ್ಟಿ, ಕೇಸು ಚೌವ್ಹಾಣ, ಸಂತೋಷ ಜಾಧವ, ಪ್ರಶಾಂತ ಕದಂ, ಮಲ್ಲು ಮರಗುತ್ತಿ, ಶ್ರೀನಿವಾಸ ಗುರುಮಠಕಲ್, ರಾಜೇಂದ್ರಬಾಬು ಹೀರಾಪೂರಕರ್, ರಮೇಶ ಕಿಟ್ಟದ, ವಿಷ್ಣುಕಾಂತ ಪರುತೆ, ತಿಮ್ಮಯ್ಯ ಒಡೆಯರಾಜ, ಹಣಮಂತ ಸೇಗಾಂವಕರ್, ಸುರೇಶ ಸೇಗಾಂವಕರ್, ಶೀವು ಕದಂ, ಬಲರಾಮ್ ವಲ್ಲ್ಯಾಪುರ, ಕೃಷ್ಣ ಸಿಂಗಶೇಟ್ಟಿ ಸೇರಿದಂತೆ ಅನೇಕರಿದ್ದರು.
  ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ರಾಜಾಪೂರ ಪಿಡಿಓ ನಿರ್ಲಕ್ಷ:
ಪಟ್ಟಣ ಅಮೀಪದ ರಾಜಾಪೂರ ಗ್ರಾಪಂ. ಪಿಡಿಓ ಸಂಗೀತಾ ಭಂಡಾರಿ ಅವರು ತಮ್ಮ ಕರ್ತವ್ಯಪ್ರಜ್ಞೆಯನ್ನು ಮರೆತು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನವನ್ನು ಮರೆತು ಗ್ರಾಪಂ. ಕಾರ್ಯಾಲಯದಲ್ಲಿ ನೆರವೇರಿಸುತ್ತಿರುವ ಧ್ವಜಾರೋಹಣಕ್ಕೂ ಆಗಮಿಸದೇ ನಿರ್ಲಕ್ಷ ಧೋರಣೆ ಮೇರೆದಿದ್ದಾರೆಂದು ಗ್ರಾಪಂ.ಸದಸ್ಯರಾಗಿರುವ ಸತ್ಯನಾರಾಯಣರಾವ ಭರತನೂರ ಹಾಗೂ ಪ್ರಕಾಶರೆಡ್ಡಿ ರಾಜಾಪೂರ ಅವರು ಆರೋಪಿಸಿದ್ದಾರೆ.
  ಗ್ರಾಪಂ.ಸದಸ್ಯರು ಧ್ವಜಾರೋಹಣ ಮಾಡಿದ ಮೇಲೆ ಗ್ರಾಪಂ. ಕಾರ್ಯಾಲಯಕ್ಕೆ ಆಗಮಿಸಿ ತಮ್ಮ ಮೊಂಡುತನವನ್ನು ತೋರಿಸುತ್ತಿರುವ ಪಿಡಿಓ ಮೇಲೆ ತಕ್ಕ ಕ್ರಮ ಕೈಗೋಳ್ಳುವಂತೆ ಮೇಲಾಧಿಕಾರಿಗಳಿಗೆ ಸದಸ್ಯರು ತಿಳಿಸಿದ್ದಾರೆ.