ಬಿಜೆಪಿಯಿಂದ ದಲಿತರಿಗೆ ನ್ಯಾಯ

ಛಲವಾದಿ ಸಮಾಜದ ಮುಖಂಡರು ಬಿಜೆಪಿಗೆ ಸೇರ್ಪಡೆ
ರಾಯಚೂರು,ಮೇ.೦೭- ಮೀಸಲಾತಿ ಹೆಚ್ಚಳ, ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಬಿಜೆಪಿ ಸರ್ಕಾರ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದು ಬಿಜೆಪಿಯ ಮುಖಂಡ ಕೆ.ನಾಗಲಿಂಗಸ್ವಾಮಿ ವಕೀಲರು ಹೇಳಿದರು.
ಇಂದು ಪಟ್ಟಣದ ಬಿಜೆಪಿ ಕಾರ್ಯಾಲಯದ ಆವರಣಲ್ಲಿ ನಡೆದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಛಲವಾದಿ ಸಮಾಜದ ಮುಖಂಡರು ಮತ್ತು ಯುವಕರು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೂ ದಲಿತರನ್ನು ಮತಬ್ಯಾಂಕ್ ಆಗಿದ್ದ ದಲಿತರಿಗೆ ದ್ರೋಹ ಮಾಡಿದೆ.
ಯಾವುದೇ ಒಂದು ಸಮಾಜ ನಿರ್ದಿಷ್ಟವಾಗಿ ಒಂದೇ ಪಕ್ಷಕ್ಕೆ ಸೀಮಿತವಲ್ಲ ಅದರಂತೆ ಛಲವಾದಿಗಳು ಅಂದರೆ ಕಾಂಗ್ರೆಸ್ ಎನ್ನುವುದು ತಪ್ಪು ಎಲ್ಲ ಪಕ್ಷದಲ್ಲಿಯೂ ಎಲ್ಲ ಸಮಾಜದವರು ಇರುತ್ತಾರೆ.
ಬಿಜೆಪಿ ಸೇರ್ಪಡೆಯಾದ ಎಲ್ಲ ಛಲವಾದಿ ಸಮಾಜದ ಮುಖಂಡರು ತಮ್ಮ ತಮ್ಮ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಬಿ.ವಿ.ನಾಯಕ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಬಿಜೆಪಿಯ ಅಭ್ಯರ್ಥಿ ಬಿ.ವಿ.ನಾಯಕ ಮಾತನಾಡಿ ಛಲವಾದಿ ಸಮಾಜವು ನನ್ನನ್ನು ಆಶೀರ್ವದಿಸಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅನಿಲಕುಮಾರ, ಶಿವರಾಜ ಜಾನೇಕಲ್, ಬಸವರಾಜ ಕವಿತಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ವಕ್ತಾರರಾದ ಬಂಡೇಶ್ ವಲ್ಕಂದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ಮುಖಂಡರಾದ ಮಾನಪ್ಪ ನಾಯಕ, ಕೊಟ್ರೇಶಪ್ಪ ಕೋರಿ, ಚಂದ್ರಕಲಾಧರಸ್ವಾಮಿ, ಮಾಜಿ ಜಿ ಪಂ ಸದಸ್ಯ ವೀರಭದ್ರಪ್ಪಗೌಡ, ಅಯ್ಯಪ್ಪ ಮ್ಯಾಕಲ್, ಸತ್ಯನಾರಾಯಣ ವಕೀಲರು, ರಾಮನಗೌಡ ಗವಿಗಟ್, ಜಯರಾಜ ಚಿಕ್ಕಬಾದರದಿನ್ನಿ, ನರಸಪ್ಪ ಜೂಕೂರು, ಹುಚ್ಚಪ್ಪ ವಡವಟ್ಟಿ, ಹನುಮಂತ ಕೋರಿ, ಶರಣಬಸವ ನಾಯಕ, ಹನುಮೇಶ ಸಾದಾಪೂರು, ಬಸವರಾಜ ನಕ್ಕುಂದ, ಬಾಲಯ್ಯ ಹಳ್ಳಿಹೊಸೂರು, ಮಾರೇಶ ಬಂಡಾರಿ, ಚಂದ್ರು ಜಾನೇಕಲ್, ಬುಡ್ಡಪ್ಪ ನಾಯಕ, ಹನುಮೇಶ ನಾಯಕ ಜೀನೂರು, ಸೇರಿದಂತೆ ಅನೇಕರು ಇದ್ದರು.
ಅನೇಕ ಗ್ರಾಮಗಳ ಛಲವಾದಿ ಸಮಾಜದ ಮುಖಂಡರನ್ನು ಬಿಜೆಪಿಯ ಅಭ್ಯರ್ಥಿ ಬಿ.ವಿ.ನಾಯಕ, ಮಲ್ಲಿಕಾರ್ಜುನ ಜಕ್ಕಲದಿನ್ನಿಯವರು ಪಕ್ಷದ ಶಾಲು ಹಾಕುವ ಮೂಲಕ ಸೇರ್ಪಡೆ ಮಾಡಿಕೊಂಡರು.