ಬಿಜೆಪಿಯಿಂದ ಜನರ ವಂಚನೆ: ರಾಮಲಿಂಗಾರೆಡ್ಡಿ

ಬೆಂಗಳೂರು, ಮೇ. ೧- ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಸಂಕಷ್ಟವನ್ನು ಎಂದಿಗೂ ಬಗೆಹರಿಸುವ ಕಡೆ ಗಮನಹರಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿರವರು ತಿಳಿಸಿದರು.
ಕ್ಷೇತ್ರದ ವಿವಿಧ ಕಡೆ ಮತಯಾಚನೆ ಮಾಡುವ ವೇಳೆ ಮಾತನಾಡಿದ ಅವರು ಮೋದಿಯವರು ಕೇವಲ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಜನರಿಗೆ ಸುಳ್ಳಿನ ಭರವಸೆಗಳ ಮೂಲಕ ವಂಚಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಡಬ್ಬಲ್ ಇಂಜಿನ್ ಬಿಜೆಪಿ ಸರ್ಕಾರದಿಂದ ಜನರನ್ನು ವಂಚಿಸುತ್ತಿರುವುದು ಬಹಿರಂಗವಾಗಿದೆ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರು ಕ್ಷೇತ್ರದಲ್ಲಿ ಸುಮಾರು ೬ ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ. ಹೆಚ್ಚು ಸಂಚಾರ ದಟ್ಟಣೆಯಿಂದ ಕೂಡಿರುವ ಜಂಕ್ಷನ್ ಗಳಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಸೌಲಭ್ಯಗಳೊಂದಿಗೆ ೭ ಮೇಲ್ಸೇತುವೆ ಪಾದಚಾರಿ ಮಾರ್ಗ-ಸ್ಕೈವಾಕ್ ಗಳನ್ನು ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಹೀಗಾಗಿ ಜನರು ಈ ಬಾರಿ ಆಶೀರ್ವದಿಸಬೇಕೆಂದು ಕೋರಿದ್ದಾರೆ.
ಮಡಿವಾಳ ವಾರ್ಡ್‌ನಲ್ಲಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿರವರ ನೇತೃತ್ವದಲ್ಲಿ ಸುಮಾರು ೫೦೦ ಮಂದಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಪ್ರಚಾರದ ವೇಳೆ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಯುವ ಘಟಕದ ಅಧ್ಯಕ್ಷ ಲಿತೇಶ್ ಎಂ. ರೆಡ್ಡಿ ಮತ್ತಿತರ ಮುಖಂಡರುಗಳು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿರವರು ಮಡಿವಾಳ ವಾರ್ಡ್‌ನಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಯುವ ಘಟಕದ ಅಧ್ಯಕ್ಷ ಲಿತೇಶ್ ಎಂ. ರೆಡ್ಡಿ ಮತ್ತಿತರ ಮುಖಂಡರುಗಳು ಉಪಸ್ಥಿತರಿದ್ದರು.