ಬಿಜೆಪಿಯಿಂದ ಗಾಂವ್  ಚಲೋ ಅಭಿಯಾನ

ಸಂಜೆವಾಣಿ ವಾರ್ತೆ

ಹಿರಿಯೂರು: ಫೆ.7-ಹಿರಿಯೂರಿನ ರೋಟರಿ ಸಭಾ ಭವನದಲ್ಲಿ ಬಿಜೆಪಿ  ಹಿರಿಯೂರು ಮಂಡಲದಿಂದ ಏರ್ಪಡಿಸಿದ್ದ ಗಾಂವ್ (ಗ್ರಾಮ)ಚಲೋ ಅಭಿಯಾನದಲ್ಲಿ  ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷರಾದ ವಿ.ವಿಶ್ವನಾಥ್ ರವರು ಅಧ್ಯಕ್ಷತೆವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿಯವರ ರಾಷ್ಟ್ರಪ್ರೇಮ ಹಾಗೂ ದೇಶವನ್ನು ಮುನ್ನಡೆಸುತ್ತಿರುವ ಬಗ್ಗೆ ಹಾಗೂ ಪ್ರಗತಿ ಪಥದತ್ತ  ಕೊಂಡೊಯುತ್ತಿರುವ ಬಗ್ಗೆ ತಿಳಿಸಿದರು  ಜಿಲ್ಲಾಧ್ಯಕ್ಷರಾದ ಎ.ಮುರುಳಿರವರು, ಮಾತನಾಡಿ ಭಾರತೀಯ ಜನತಾ ಪಕ್ಷದ ಪ್ರಗತಿಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಹಾಗೂ ಗಾಂವ್  ಚಲೋ ಅಭಿಯಾನದ ಬಗ್ಗೆ ತಿಳಿಸಿದರು ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿರವರು, ಬಿಜೆಪಿ ಹಿರಿಯ ಮುಖಂಡರು, ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಎನ್.ಆರ್. ಲಕ್ಷ್ಮೀಕಾಂತ್  ಈ ಗಾಂವ್ (ಗ್ರಾಮ)ಚಲೋ ಅಭಿಯಾನದ ಜಿಲ್ಲಾ ಸಂಚಾಲಕರಾದ ಡಾ. ಸಿದ್ದಾರ್ಥರವರು,ಸಂಚಾಲಕರಾದ ಶಿವಣ್ಣ,ಮಂಡಲದ ನಿಕಟ ಪೂರ್ವ ಅಧ್ಯಕ್ಷರುಗಳಾದ ಸೋಮಣ್ಣ,ಎಂ.ವಿ.ಹರ್ಷ ,ದ್ಯಾಮೆಗೌಡ್ರು, ಹಿರಿಯ ಮುಖಂಡರಾದ ಎಂ.ಎಸ್.ರಾಘವೇಂದ್ರ,ಹೆಚ್.ಮಹೇಶ್ ,ಜಿಲ್ಲೆಯ ಉಪಾಧ್ಯಕ್ಷರಾದ ಮಂಜುಳ, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಅಸ್ಗರ್ ಅಹ್ಮದ್ ,ನಗರ ಘಟಕದ ಅಧ್ಯಕ್ಷರಾದ ಟಿ.ಚಂದ್ರಹಾಸ್ ,ಮಂಡಲದ ಸಂಚಾಲಕರಾದ ಕೆ.ನಾಗರಾಜ್,ಮಂಡಲ ಪ್ರಧಾನ ಕಾರ್ಯದರ್ಶಿ ಶಂಭುಲಿಂಗೇಶ್ ರವರು ಹಾಗೂ ಈ ಗಾಂವ್ (ಗ್ರಾಮ)ಚಲೋ ಅಭಿಯಾನದ ಬೂತ್ ನ ಪ್ರವಾಸಿ ಸಂಚಾಲಕರುಗಳು, ಬೂತ್ ಸಂಚಾಲಕರುಗಳು ಮತ್ತು ಬಾಜಪ ಪಕ್ಷದ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಮಂಡಲದ ವಿವಿಧ ಸ್ಥರದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.